Monday, June 22, 2026
spot_imgspot_img
spot_imgspot_img

ಉಡುಪಿ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಸತೀಶ್‌ ಪೂಜಾರಿವರಿಗೆ ನುಡಿನಮನ ಕಾರ್ಯಕ್ರಮ

- Advertisement -
- Advertisement -

ಸಮಾಜದಲ್ಲಿ ಆಸ್ತಿಕನಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ದಿ. ಸತೀಶ್‌ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ನುಡಿನಮನ ಕಾರ್ಯಕ್ರಮ ಬನ್ನಂಜೆ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಸತೀಶ್‌ ಪೂಜಾರಿಯವರು ENT ಶಸ್ತ್ರಚಿಕಿತ್ಸಕ ವೈದ್ಯರಾಗಿ, ಹೆಸರಾಂತ ಗಾಯಕರಾಗಿ ಗುರುತಿಸಿಕೊಂಡವರು.

ಕಾರ್ಯಕ್ರಮದಲ್ಲಿ ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸಂಸ್ಥಾಪಕರು ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ, ಬಿಲ್ಲವ ಸಮಾಜದ ಹಿರಿಯರು ಬನ್ನಂಜೆ ಬಾಬು ಅಮೀನ್, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಅಧ್ಯಕ್ಷರು ಪ್ರವೀಣ್ ಎಮ್. ಪೂಜಾರಿ, ವಿಶ್ವನಾಥ ಕ್ಷೇತ್ರ ಕಟಪಾಡಿ ದೇವಸ್ಥಾನ ಸಮಿತಿ ಅಧ್ಯಕ್ಷರು ಬಿ.ಎನ್.ಶಂಕರ ಪೂಜಾರಿ, ವಿಶ್ವನಾಥ ಪೂಜಾರಿ ಕಲ್ಮಾಡಿ, ಅಚ್ಯುತ ಅಮೀನ್ ಕಲ್ಮಾಡಿ, ಸೇರಿದಂತೆ ಬಿಲ್ಲವ ಸಮಾಜದ ಅನೇಕರು ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

- Advertisement -

Related news

error: Content is protected !!