- Advertisement -
- Advertisement -




ಕಾರ್ಕಳ: ಇಲೆಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ಸ್ ಸೆಂಟರ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ಮಾರುಕಟ್ಟೆ ರಸ್ತೆಯಲ್ಲಿನ ಇಲೆಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ಸ್ ಸೆಂಟರ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ತ್ವರಿತ ಗತಿಯಲ್ಲಿ ಕಾರ್ಕಳದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.
ಸ್ವಿಚ್ ಬೋರ್ಡ ನಲ್ಲಿ ಬೆಂಕಿ ಹೊತ್ತಿ ಉರಿದಿತ್ತು, ಅದೇ ಸಂದರ್ಭದಲ್ಲಿ ಮಳಿಗೆಯ ಬಾಗಿಲು ತೆರೆಯಲು ಮುಂದಾದಾಗ ಸುಟ್ಟ ವಾಸನೆ ಹಾಗೂ ಹೊಗೆ ಆವರಿಸಿಕೊಂಡಿರುವುದರಿಂದ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಭಾರೀ ಅನಾಹುತ ತಪ್ಪಿದೆ.
- Advertisement -