- Advertisement -
- Advertisement -


ಕಾಸರಗೋಡು: ಮನೆಗೆ ನುಗ್ಗಿ ಕಳವುಗೈದ ಮರುದಿನವೇ ಆರೋಪಿಯನ್ನು ಬಂಧಸಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಪಚ್ಚಂಬಳದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಇಚ್ಲಂಗೋಡು ಪಚ್ಚಂಬಳದ ಮುರ್ಶಿದ್ (19) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಪಚ್ಚಂಬಳದ ಅಬ್ದುಲ್ ಮಜೀದ್ ರವರ ಮನೆಗೆ ನುಗ್ಗಿದ ಈತ 29,700 ರೂ.ಕಳವು ಮಾಡಿದ್ದನು. ಎರಡು ಅಂತಸ್ತಿನ ಈ ಮನೆಯ ಟೆರೆಸ್ ನ ಬಾಗಿಲು ಮುರಿದು ಒಳನುಗ್ಗಿದ್ದು, ಕಪಾಟಿನಲ್ಲಿ ಇರಿಸಲಾಗಿದ್ದ ಹಣವನ್ನು ಕಳವುಗೈದು ಪರಾರಿ ಯಾಗಿದ್ದನು .
ಮನೆಯವರು ಕೆಳ ಅಂತಸ್ತಿನಲ್ಲಿ ಮಲಗಿದ್ದರು.ಮರುದಿನ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಕುಂಬಳೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಂಕಿತ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ವಿಚಾರಣೆ ನಡೆಸಿದಾಗ ಮುರ್ಶಿದ್ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
- Advertisement -








