


ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀಧಾಮ ಮಾಣಿಲದ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಡಾ| ಎಂ ಮೋಹನ್ ಆಳ್ವ, ಅಧ್ಯಕ್ಷರು ಆಳ್ವಾಸ್ ಎಜುಕೇಷನಲ್ ಫೌಂಡೇಶನ್ ಮೂಡಬಿದಿರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪ ಸಮಾರಂಭವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರ ಶ್ರೀ ಧಾಮ ಮಾಣಿಲ ಹಾಗೂ ಸಾದ್ವಿ ಶ್ರೀ ಮಾತಾನಂದಮಯಿ ಶ್ರೀ ಕ್ಷೇತ್ರ ಒಡಿಯೂರು ಇವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸುಧೀರ್ ಶೆಟ್ಟಿ ಕಣ್ಣೂರು ಮಹಾಪೌರರು ಮಂಗಳೂರು ಮಹಾನಗರ ಪಾಲಿಕೆ, ಲೋಕೇಶ್ ಕುಲಾಲ್ ಮಂಜುನಾಥ ಸ್ವೀಟ್ಸ್ ಬೆಂಗಳೂರು, ಮೋನಪ್ಪ ಭಂಡಾರಿ ಅಧ್ಯಕ್ಷರು ಬೆಳ್ಳಿಹಬ್ಬ ಸಮಿತಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ, ದೇವಪ್ಪ ಕುಲಾಲ್ ಕಾರ್ಯದರ್ಶಿ ಬೆಳ್ಳಿಹಬ್ಬ ಸಮಿತಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ, ತಾರಾನಾಥ ಕೊಟ್ಟಾರಿ ಬೆಳ್ಳಿಹಬ್ಬ ಸಮಿತಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ, ಭಾಸ್ಕರ ಶೆಟ್ಟಿ, ರೇವತಿ ಪೆರ್ನೆ ಗೌರವಾಧ್ಯಕ್ಷರು ಮಹಿಳಾ ಮಂಡಳಿ, ವನಿತಾ ಶೆಟ್ಟಿ ಅಧ್ಯಕ್ಷರು ಮಹಿಳಾ ಮಂಡಳಿ, ಸುಂದರರಾಜ್ ರೈ ಅಧ್ಯಕ್ಷರು ತುಳುಕೂಟ ಬೆಂಗಳೂರು, ನವೀನ್ ಹೆಗ್ಡೆ ಅಧ್ಯಕ್ಷರು ಕರಾವಳಿ ಕನ್ನಡ ವೇದಿಕೆ ಬೆಂಗಳೂರು, ಬಿ ಎಸ್ ಕುಮಾರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ಕುಂಬಾರ ನೌಕರರ ಸಂಘ, ದಿವಾಕರ್ ಮೂಲ್ಯ ಉದ್ಯಮಿ ಬೆಂಗಳೂರು,ದಯಾನಂದ ಶೆಟ್ಟಿ ಉಜಿರೆಮಾರ್ ಅಧ್ಯಕ್ಷರು ಪುತ್ತೂರು ಮಂಡಲ ಬಿಜೆಪಿ, ಮಧುಸೂಧನ್ ಕೊಲ್ಯ, ಅನಿಲ್ ದಾಸ್ ಕೊಲ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದ ಕ ಜಿಲ್ಲೆ, ಹಾಗೂ ಸುಳ್ಯ ವಿಧಾನಸಭಾ ಶಾಸಕಿ ಭಗೀರಥಿ ಮುರುಳ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.



ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.