Sunday, June 29, 2025
spot_imgspot_img
spot_imgspot_img

ಬ್ರಹ್ಮಾವರ: ಚಿನ್ನವನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ 75 ಲಕ್ಷ ರೂ. ವಂಚನೆ..!

- Advertisement -
- Advertisement -

ಬ್ರಹ್ಮಾವರ: ಫೈನಾನ್ಸಿನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಒಟ್ಟು 75 ಲಕ್ಷರೂ.ಗಳನ್ನು ವಂಚಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಸುವಾಸಿನಿ ಹಾಗೂ ಆತನ ಸಹೋದರ ವಾದಿರಾಜ ಎಂಬವರು ನಡೂರಿನ ನಿತ್ಯಾನಂದ ಎಂಬವರಿಗೆ 35 ಲಕ್ಷ ರೂ.ಸೇರಿದಂತೆ ಹಲವರಿಗೆ ಒಟ್ಟು 75 ಲಕ್ಷ ರೂ.ವಂಚಿಸಿದ ಆರೋಪಿಗಳು.

ಮಣಿಪಾಲದ ಸಿಟಿಕಾರ್ಪ್ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಇವರು ನಿತ್ಯಾನಂದ (64) ಹಾಗೂ ಇತರರನ್ನು ನಂಬಿಸಿ 2023ರ ಡಿ.11ರಿಂದ 2024ರ ಜು.16ರವರೆಗೆ ಈ ಹಣವನ್ನು ಪಡೆದಿದ್ದರು ಎನ್ನಲಾಗಿದೆ.

ಆದರೆ ಇದುವರೆಗೂ ಅವರು ಹೇಳಿದ ಚಿನ್ನವನ್ನು ನೀಡದೆ ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸದೆ ಮೋಸ ಮಾಡಿ ರುವುದಾಗಿಯೂ, ಹಣವನ್ನು ವಾಪಾಸು ಕೇಳಿದ್ದಕ್ಕೆ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!