


ಬೆಂಗಳೂರು: ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಕರ್ನಾಟಕದಾದ್ಯಂತ ಬ್ರಾಂಡೆಡ್ ಮದ್ಯದ ಬೆಲೆ ಶೇಕಡಾ 15 ರಿಂದ 25 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ರಾಜ್ಯ ಅಬಕಾರಿ ಇಲಾಖೆಯು ಜೂನ್ನಲ್ಲಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2024 ಕ್ಕೆ ಸೂಚನೆ ನೀಡಿತ್ತು. ಇದರಂತೆ ಮದ್ಯದ ಬೆಲೆಗಳು ಕಡಿಮೆಯಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ
ಅದರಲ್ಲೂ ಪ್ರೀಮಿಯಂ ಮದ್ಯದ ಬೆಲೆಗಳ ದರ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಅಂತಿಮ ಅಧಿಸೂಚನೆಯು ಕರ್ನಾಟಕದ ನೆರೆ ರಾಜ್ಯಗಳಲ್ಲಿನ ಮದ್ಯದ ದರಗಳಿಗೆ ಹೊಂದಾಣಿಕೆ ಆಗುವಂತೆ ಭಾರತದಲ್ಲಿ ತಯಾರಿಸಿರುವ ಮದ್ಯದ (ಐಎಂಎಲ್) ಅಬಕಾರಿ ಸುಂಕದ ಸ್ಲ್ಯಾಬ್ಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸುವ ಸಾಧ್ಯತೆ ಇದೆ.
ಅದರಲ್ಲೂ ಕರ್ನಾಟದಕಲ್ಲಿ ಪ್ರೀಮಿಯಂ ಮದ್ಯದ ದರ ಬೇರೆ ರಾಜ್ಯಗಳಿಂತ ಹೆಚ್ಚಾಗಿರುವುದರಿಂದ ಜನರು ಖರೀದಿಗೆ ಮುಂದಾಗುತ್ತಿದ್ದಾರೆ. ರಾಜ್ಯದಲ್ಲೂ ಅದೇ ಬೆಲೆ ಪ್ರೀಮಿಯಂ ಮದ್ಯ ಸಿಕ್ಕರೆ ಹೊರ ರಾಜ್ಯದಿಂದ ಮದ್ಯ ಖರೀದಿಗೆ ಬ್ರೇಕ್ ಹಾಕಬಹುದು ಹಾಗೂ ಕಡಿಮೆ ಮೊತ್ತಕ್ಕೆ ಉತ್ತಮ ಗುಣಮಟ್ಟದ ಮದ್ಯ ಪೂರೈಕೆ ಮಾಡಬಹುದು. ಅಲ್ಲದೇ ರಾಜ್ಯದ ಅಬಕಾರಿ ಇಲಾಖೆಯ ಆದಾಯವೂ ಹೆಚ್ಚಾಗಲಿದೆ ಎಂಬುವುದು ಅಬಕಾರಿ ಇಲಾಖೆಯ ಉದ್ದೇಶವಾಗಿದೆ
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಅದರಲ್ಲೂ ಕೋವಿಡ್ ಸಂಕಷ್ಟದ ಬಳಿಕ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಳವಾಗಿದ್ದು, ಈ ಬಾರಿಯ ಬೇಸಿಗೆ ಅವಧಿಯಲ್ಲಿ ಮದ್ಯ ಪ್ರಿಯಕರು ಬಿಯರನ್ನು ಆದ್ಯತೆಯ ರಿಫ್ರೆಶ್ಮೆಂಟ್ ಅಂತ ಆಯ್ಕೆ ಮಾಡಿಕೊಂಡಿದ್ದಾರೆ.
ಅಂತಿಮ ಅಧಿಸೂಚನೆ ಮತ್ತು ಪರಿಷ್ಕೃತ ದರಗಳು ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದರೂ, ರಾಜಕೀಯ ಕಾರಣಗಳಿಂದ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಅಲ್ಲದೇ ಹೊಸ ಪರವಾನಗಿ ಕೊಡುವ ವಿಳಂಬ ಆಗಿರುವುದರಿಂದ ಅಧಿಸೂಚನೆ ಹೊರಬರುವುದು ತಡವಾಗುತ್ತಿದೆಯಂತೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು, ಡಿಸ್ಟಿಲರಿಗಲು ಮದ್ಯದ ಉತ್ಪಾದನೆಯನ್ನು ಕಡಿಮೆ ಮಾಡಿದ್ದಾರಂತೆ.