


ವಿಟ್ಲ: ಸೌದಿ ಅರೇಬಿಯಾದ ಉದ್ಯಮಿಯೊಬ್ಬರು ವಿಠಲ ಪ್ರೌಢ ಶಾಲೆಯ ಉಚಿತ ಶಿಕ್ಷಣದ ವಿದ್ಯಾ ಪೋಷಕ ಸಮಿತಿಗೆ ದೇಣಿಗೆ ಹಾಗೂ ಕ್ರೀಡಾ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಸಮವಸ್ತ್ರ ಬಿಡುಗಡೆಗೊಳಿಸಲಾಯಿತು.
ವಿಠಲ ಪ್ರೌಢ ಶಾಲೆಯಲ್ಲಿ ಕಳೆದ ಹಲವಾರು ಸಮಯಗಳಿಂದ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೇ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಮನಗಂಡ ಸೌದಿ ಅರೇಬಿಯಾದ ಉದ್ಯಮಿ, ವಿಟ್ಲ ಮೇಗಿನಪೇಟೆ ನಿವಾಸಿ, ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ವಿಕೆಎಂ ಅಬ್ದುಲ್ ಸಾಲಿ ಅವರು ವಿಠಲ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ದೇಣಿಗೆ ಹಾಗೂ ಕ್ರೀಡಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಉಚಿತವಾಗಿ ನೀಡಿದ್ದರು. ಅವರು ಶಾಲೆಯಲ್ಲಿ ಶಾಲಾ ಧ್ವಜಾರೋಹಣಗೈದು ಬಳಿಕ ಸಮವಸ್ತ್ರ ಬಿಡುಗಡೆಗೊಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ, ಶಿಕ್ಷಕಿರಾದ ಲೀಲಾ, ಎಂ ಕೆ ವೀಣಾ ದೇವಿ, ಶಿಕ್ಷಕರಾದ ರಮೇಶ್ ಬಿ.ಕೆ, ಉದಯ, ಶಂಕರ್ ಪ್ರಸಾದ್, ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ, ದೈಹಿಕ ಶಿಕ್ಷಕಿ ಜೀವಣ್ಯ, ಮೊದಲಾದವರು ಉಪಸ್ಥಿತರಿದ್ದರು.