- Advertisement -
- Advertisement -



ಶ್ರೀ ರಾಜಲಕ್ಷ್ಮೀ ಎಂಟರ್‌ಪ್ರೈಸಸ್ ಅರ್ಪಿಸುವ ಬಾಲ ಪ್ರತಿಭೆ ಮನಸ್ವಿ ಆರ್ ಶೆಟ್ಟಿ ಗಾಯನದ ’ಕೃಷ್ಣ ನಾದಾಮೃತ’ ಹಾಡು ಬಿಡುಗಡೆಗೊಂಡಿತು.
ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಸಡಗರದ ಸಂದರ್ಭ ಕರಾವಳಿಯ ಬಹುಮುಖ ಪ್ರತಿಭೆ, ಅದೆಷ್ಟೋ ವೇದಿಕೆಗಳಲ್ಲಿ ನೃತ್ಯ, ಯಕ್ಷಗಾನ ಹಾಗೂ ಗಾಯನದ ಮೂಲಕ ಮಿಂಚಿದ ಕರಾವಳಿಯ ಬಾಲ ಪ್ರತಿಭೆ ಮನಸ್ವಿ ಆರ್ ಶೆಟ್ಟಿ ಗಾಯನದ ’ಕೃಷ್ಣ ನಾದಾಮೃತ’ ಹಾಡಿಗೆ ಶೆಟ್ಟಿ ವಿಜಯ್ ರಾಜ್ ಸಾಹಿತ್ಯ ಬರೆದಿದ್ದು, ರಾಜು ಕ್ರಿಯೇಟಿವ್ ಉಪ್ಪಳ ಇವರು ಸಂಕಲನ ಮಾಡಿದ್ದಾರೆ.
ಶಮೀರ್ ಮುಡಿಪು ಇವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡಿಗೆ ರಂಜು ಧಾಮ ಛಾಯಾಗ್ರಹಣ ಚಿತ್ರೀಕರಣ ಮಾಡಿದ್ದಾರೆ. ರಾಧಕೃಷ್ಣ ಎರುಂಬು ಹಾಗೂ, ಇಸ್ಕಾನ್ ದೇವಸ್ಥಾನ ಮುಡಿಪು ಇವರ ಸಹಕಾರವಿದೆ.
- Advertisement -