

2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದ್ದು, ಕಂಬಳ ಸೀಸನ್ ಅಕ್ಟೋಬರ್ 26 ರಿಂದ 2025ರ ಏಪ್ರಿಲ್ 19ರವರೆಗೆ ನಡೆಯಲಿದೆ.
ಈ ವರ್ಷದ ಮೊದಲ ಕಂಬಳ ಕೂಟವನ್ನು ಬೆಂಗಳೂರಿನಲ್ಲಿಯೇ ಆಯೋಜಿಸಿದೆ.ಬೆಂಗಳೂರು ಕಂಬಳದ ಯಶಸ್ವಿ ನಂತರ ಈ ಋತುವಿನಲ್ಲಿ ಶಿವಮೊಗ್ಗದಲ್ಲಿ ಕಂಬಳ ಕ್ರೀಡೆ ಆಯೋಜಿಸಲಾಗಿದೆ. ಈ ಋತುವಿನ ಕಂಬಳದ ವೇಳಾಪಟ್ಟಿ ಸಿದ್ಧಪಡಿಸಲು ಶನಿವಾರ ಸೇರಿದ್ದ ಸಭೆಯಲ್ಲಿ ಶಿವಮೊಗ್ಗ ಕಂಬಳದ ದಿನಾಂಕವನ್ನು ನಿಗದಿಪಡಿಸಲಾಯಿತು.
ಬೆಂಗಳೂರಿನಲ್ಲಿ ಮೊದಲ ಕಂಬಳ ಅಕ್ಟೋಬರ್ 26ರಂದು ಮತ್ತು ಕೊನೆಯ ಕಂಬಳವನ್ನು ಮುಂದಿನ ವರ್ಷದ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಈ ಋತುವಿನಲ್ಲಿ ಒಟ್ಟು 26 ಕಂಬಳಗಳನ್ನು ನಡೆಸಲಾಗುವುದು.
2024-25 ರ ಕಂಬಳ ವೇಳಾಪಟ್ಟಿ ಇಲ್ಲಿದೆ
(2024ರ ವೇಳಾಪಟ್ಟಿ)
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
(2025ರ ವೇಳಾಪಟ್ಟಿ)
ಜನವರಿ 4 – ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 – ಅಡ್ವೆ
ಜನವರಿ 25 – ಮೂಡುಬಿದಿರೆ
ಫೆಬ್ರವರಿ 1 – ಐಕಳ
ಫೆಬ್ರವರಿ 8 – ಜೆಪ್ಪು
ಫೆಬ್ರವರಿ 15 – ತಿರುವೈಲುಗುತ್ತು
ಫೆಬ್ರವರಿ 22 – ಕಟಪಾಡಿ
ಮಾರ್ಚ್ 1 – ಪುತ್ತೂರು
ಮಾರ್ಚ್ 8 – ಬಂಟ್ವಾಳ
ಮಾರ್ಚ್ 15 – ಬಂಗಾಡಿ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 – ವೇಣೂರು
ಎಪ್ರಿಲ್ 5 – ಬಳ್ಕುಂಜೆ
ಎಪ್ರಿಲ್ 12 – ಗುರುಪುರ
ಎಪ್ರಿಲ್ 19 – ಶಿವಮೊಗ್ಗ








