ಬಾಲಕ-ಬಾಲಕಿಯರ ಎರಡೂ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ (RMSA) ವಿಟ್ಲ ಪ್ರಥಮ ಸ್ಥಾನ



ವಿಟ್ಲ: ಸರಕಾರಿ ಪ್ರೌಢ ಶಾಲೆ (RMSA) ವಿಟ್ಲದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಪ್ರೈಮರಿ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟವು ಇಂದು ನಡೆಯಿತು.
ಈ ಪಂದ್ಯಾಟವನ್ನು ಉದ್ಯಮಿ ಸುಭಾಶ್ಚಂದ್ರ ನಾಯಕ್ ಉದ್ಘಾಟಿಸಿದರು. ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷರು ವಿಟ್ಲ ಪ.ಪಂ. ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಂಗೀತ ಪಾಣೆಮಜಲು ಉಪಾಧ್ಯಕ್ಷರು ವಿಟ್ಲ ಪ.ಪಂ, ವಿಟ್ಲ ಪ.ಪಂಚಾಯತ್ ಸದಸ್ಯರಾದ ರವಿಪ್ರಕಾಶ್ , ಗೋಪಿಕೃಷ್ಣ, ಅಶ್ರಫ್, ಸುನೀತ ಕೋಟ್ಯಾನ್, ಶಿವಪ್ರಸಾದ್ ರೈ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಸುಧಾ, ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕರು, ರಮಾನಾಥ ವಿಟ್ಲ ಉಪಾಧ್ಯಕ್ಷರು ಬಂಟ್ವಾಳ ತಾಲೂಕು ಕಬಡ್ಡಿ ಅಸೋಸಿಯೇಷನ್ಸ್, ಮಹಮ್ಮದ್ ಶಾಫಿ, ಬಾಬು ಕೆ.ವಿ., ಮೋನಪ್ಪ ಗೌಡ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ, ಸುಧೀರ್ ಅಧ್ಯಕ್ಷರು ಯುವಕ ಮಂಡಲ ವಿಟ್ಲ, ರಾಜಶೇಖರ ವಿಟ್ಲ, ಶಿವಪ್ರಸಾದ್ ಶೆಟ್ಟಿ ಜಿಲ್ಲಾಧ್ಯಕ್ಷರು ಪ್ರಾ.ಶಾ. ಶಿಕ್ಷಕರ ಸಂಘ, ರಾಜೇಂದ್ರ ರೈ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಸುರೇಶ್ ಶೆಟ್ಟಿ ಉಪಾಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಜಗದೀಶ್ ರೈ, ಅಖಿಲ್ ಶೆಟ್ಟಿ ಸಂಘಟನಾ ಕಾರ್ಯದರ್ಶಿ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಪ್ರಾಥಮಿಕ ಹಾಗೂ ಪ್ರೌಢ ಶಾಲಾಭಿವೃದ್ಧಿ ಸಮಿಯ ಅಧ್ಯಕ್ಷರಾದ ರವಿಶಂಕರ ಶಾಸ್ತ್ರಿ ಹಾಗೂ ರಶ್ಮಿ ಹರೀಶ್ , ಸದಾಶಿವ ನಾಯಕ್, ಬಿಂದು ಸಮೂಹ ಸಂಪನ್ಮೂಲ ವ್ಯಕ್ತಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಿಗೆ ಹಾಗೂ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಾಗತಿಸಿದರು. ಬಂಟ್ವಾಳ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಸ್ತಾವನೆಗೈದರು. ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ವಂದಿಸಿದರು. ಸಹಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ:
ಬಾಲಕರ ವಿಭಾಗ : ಪ್ರಥಮ ಸ್ಥಾನ – ವಿಟ್ಲ ಸರ್ಕಾರಿ ಪ್ರೌಢ ಶಾಲೆ ಪ್ರಾಥಮಿಕ ವಿಭಾಗ(ಆರ್ಎಂಎಸ್ಎ)
ದ್ವಿತೀಯ ಸ್ಥಾನ – ಶಾರದ ಗಣಪತಿ ಪುಣ್ಯಕೋಟಿ ಸ್ಕೂಲ್ ಕೈರಂಗಳ
ಬಾಲಕಿಯರ ವಿಭಾಗ : ಪ್ರಥಮ ಸ್ಥಾನ – ವಿಟ್ಲ ಸರ್ಕಾರಿ ಪ್ರೌಢ ಶಾಲೆ ಪ್ರಾಥಮಿಕ ವಿಭಾಗ(ಆರ್ಎಂಎಸ್ಎ)
ದ್ವಿತೀಯ ಸ್ಥಾನ -ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ



