Thursday, June 18, 2026
spot_imgspot_img
spot_imgspot_img

ಮಾಜಿ ಡಿಸಿಎಂ ಹೆಸರು ಬಳಸಿ ವಂಚನೆ: ಯುವತಿ ಅರೆಸ್ಟ್‌

- Advertisement -
- Advertisement -

ಬೆಂಗಳೂರು ಅ31: ಮಾಜಿ ಡಿಸಿಎಂ ಅವರ ಅಣ್ಣನ ಮಗಳ ಹೆಸರನ್ನು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಕಿಲಾಡಿ ಯುವತಿಯನ್ನು ಗಂಭೀರ ಆರೋಪದ ಮೇಲೆ ಪೊಲೀಸರು ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಯುವತಿ ನಗರದ ಜ್ಞಾನಗಂಗಾ ಬಡಾವಣೆಯ ನಿವಾಸಿಯಾಗಿದ್ದು, ಮಾಜಿ ಡಿಸಿಎಂ ತನ್ನ ಚಿಕ್ಕಪ್ಪ ಎಂದು ಹೇಳಿಕೊಂಡು ಹಲವರಿಗೆ ವಂಚಿಸಿದ್ದಾಳೆ ಎನ್ನಲಾಗಿದೆ. ಅಲ್ಲದೇ ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಟಾರ್ಗೆಟ್ ಮಾಡಿ ಅವರಿಗೆ ಸ್ವಯಂ ಉದ್ಯೋಗ ಸ್ಥಾಪನೆಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ಸಾಲ ಕೊಡಿಸುತ್ತೇನೆ ಎಂದು ಹೇಳಿ ಹಣ ಪಡೆದ ಮೇಲೆ ಮೋಸ ಮಡುತ್ತಿದ್ದಳು ಎಂದು ದೂರಲಾಗಿದೆ.

 ಈಕೆ ಲಾಕ್‌ಡೌನ್ ವೇಳೆ ಪರಿಚಯವಾದ ವ್ಯಕ್ತಿಯೊಬ್ಬನಿಗೆ ತಾನೊಬ್ಬಳು ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದಳಂತೆ. ಆ ನಂತರ ಅವರ ಅಳಿಯನ ಕಾರನ್ನು ಮೈಸೂರು, ಬೆಂಗಳೂರು, ರಾಮನಗರಗಳಲ್ಲಿ ಸುತ್ತಾಡಲು ಬಾಡಿಗೆಗೆ ಪಡಿಯುತ್ತಿದ್ದಳು. ಕಾರಿನ ಬಾಡಿಗೆ 4 ಲಕ್ಷ ರೂಪಾಯಿ ತಲುಪಿದ್ರೂ ಅದನ್ನೂ ಕೊಡದೆ, ಕಾರು ಚಾಲಕನನ್ನೇ ಪ್ರೀತಿಸುವ ನಾಟಕವಾಡಿದ್ದಳಂತೆ. ಅಲ್ಲದೇ ತನ್ನನ್ನು ಮದುವೆಯಾಗದಿದ್ದರೆ ನೀನು ನನ್ನನ್ನು ರೇಪ್ ಮಾಡಿದ್ದೀಯ ಎಂಬುದಾಗಿ ದೂರು ನೀಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದಳು ಎನ್ನಲಾಗಿದೆ.ಸದ್ಯ ಪ್ರಕರಣ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿಯ ತನಿಖೆ ಮುಂದುವರೆದಿದೆ.

- Advertisement -

Related news

error: Content is protected !!