- Advertisement -
- Advertisement -






ತಿರುಪತಿ: ಟೊಮ್ಯಾಟೋ ತುಂಬಿದ ಟ್ರಕ್ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತಿದ್ದ ಕರ್ನಾಟಕ ಮೂಲ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಚಿತ್ತೂರು ತಾಲೂಕಿನ ಚಂದ್ರಗಿರಿ ಬಳಿ ನಡೆದಿದೆ.
ಮೃತಪಟ್ಟವರನ್ನು ಕರ್ನಾಟಕದ ಚಿಕ್ಕಬಳದ್ಳಾಪುರದವರಾಗಿದ್ದು ರಮೇಶ್ ಮೂರ್ತಿ (34), ಮಂಜುನಾಥ (38) ಮತ್ತು ಮುನಿ ವೆಂಕಟ ರೆಡ್ಡಿ (55) ಎಂದು ಗುರುತಿಸಲಾಗಿದೆ.
ಟೊಮೆಟೊ ತುಂಬಿಸಿಕೊಂಡಿದ್ದ ಟ್ರಕ್ ಕಲಕಡದಿಂದ ಚೆನ್ನೈಗೆ ಹೋಗುತ್ತಿತ್ತು. ಟ್ರಕ್ ಮಗುಚಿಬಿದ್ದ ಪರಿಣಾಮ ಕಾರು ತುಂಡು ತುಂಡಾಗಿ ಅಪ್ಪಚ್ಚಿಯಾಗಿದೆ. ತಿರುಪತಿಗೆ ಹೋಗಿ, ಗುರುವಾರ ಸಂಜೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಪೊಲೀಸರು ತಕ್ಷಣ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಪರಿಹಾರ ಕಾರ್ಯ ನಡೆಸಿಕೊಟ್ಟರು.
- Advertisement -








