- Advertisement -
- Advertisement -





ಉಡುಪಿ: ವ್ಯಕ್ತಿಯೋರ್ವರು ಮನೆಯಿಂದ ಹೊರ ಹೋಗಿದ್ದು ವಾಪಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯ ಕಡಿಯಾಳಿಯ ಎಂಬಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಜಯ ಶೆಟ್ಟಿ(57) ಎಂದು ಗುರುತಿಸಲಾಗಿದೆ.
ಇವರು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ಸೆ.6ರಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿದ್ದಾರೆ.
157 ಸೆ.ಮೀ. ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈ ಬಣ್ಣ ಕೋಲು ಮುಖ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
- Advertisement -