Wednesday, June 24, 2026
spot_imgspot_img
spot_imgspot_img

ಮಾಣಿ : (ಸೆ.29 ) ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ

- Advertisement -
- Advertisement -

ಮಾಣಿ :ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಇದರ ವತಿಯಿಂದ ದಿನಾಂಕ 29-09- 2024 ಆದಿತ್ಯವಾರದಂದು ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟವು ಸಾರ್ವಜನಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ಗಾಂಧಿ ಮೈದಾನ ಮಾಣಿಯಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 9.00ಕ್ಕೆ ಸಚಿನ್ ರೈ ಮಾಣಿಗುತ್ತು, ಆಡಳಿತ ಮೊಕ್ತೇಸರರು, ಶ್ರೀ ಉಳ್ಳಾಲ್ತಿ ದೈವಸ್ಥಾನ, ಮಾಣಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಂದೇಶ್ ಶೆಟ್ಟಿ ಅರಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರೋಪ ಸಮಾರಂಭ ಸಭಾ ಕಾರ್ಯಕ್ರಮದಲ್ಲಿ ರಾಜಾರಾಮ್, ಕಾಡೂರು-ಪೆರಾಜೆ, ಯಶವಂತ ಪೂಜಾರಿ ಮಾಲಕರು ಮಹಾಗಣಪತಿ ಕನ್ ಸ್ಪಕ್ಷನ್‌ & ಡೆವೆಲಪರ್ಸ್ ವಿಟ್ಲ ಪುತ್ತೂರು ಅಧ್ಯಕ್ಷರು, ಸಮರ್ಪಣ್‌ ವಿಟ್ಲ ಇವರು
ಅತಿಥಿಗಳಾಗಿ ಭಾಗವಹಿಸಲಿದ್ದರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!