Monday, August 10, 2026
spot_imgspot_img
spot_imgspot_img

ಕರೋಪಾಡಿ: ಮನೆಯೊಳಗಿದ್ದ ಬೆಲೆಬಾಳುವ ವಸ್ತು ಕಳವು; ಪ್ರಕರಣ ದಾಖಲು

- Advertisement -
- Advertisement -

ಕರೋಪಾಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೇಲ್ಚಾವಣಿಯ ಹಂಚುಗಳನ್ನು ತೆಗೆದು ಮನೆಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳವುಗೈದ ಘಟನೆ ಬಂಟ್ವಾಳದ ಕರೋಪಾಡಿಯಲ್ಲಿ ನಡೆದಿದೆ.

ಡಾ|| ಬಿ. ಕೃಷ್ಣ ರಾಜ್ ಎಂಬವರು ಪ್ರಸ್ತುತ ಮೈಸೂರಿನಲ್ಲಿ ಕುಟುಂಬ ಸಮೇತರಾಗಿ ವಾಸಮಾಡಿಕೊಂಡಿದು,್ದ ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿ ಮತ್ತು ಮನೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಬೇತ ಎಂಬಲ್ಲಿ ಇದ್ದು ಈ ಮನೆಯನ್ನು ಸಂಕಪ್ಪ ಶೆಟ್ಟಿ ಎಂಬವರು ನೋಡಿಕೊಂಡಿರುತ್ತಾರೆ. ಸೆ. 29ರಂದು ಸಂಜೆ ಕೃಷ್ಣ ರಾಜ್‌ರವರಿಗೆ ಸಂಕಪ್ಪ ಶೆಟ್ಟಿರವರು ದೂರವಾಣಿ ಮೂಲಕ ಕರೆಮಾಡಿ ಸೆ. 25 ರಿಂದ 28 ಮಧ್ಯೆ ಮನೆಯಲ್ಲಿ ಕಳ್ಳತನವಾದ ಬಗ್ಗೆ ತಿಳಿಸಿದರು. ಕೃಷ್ಣ ರಾಜ್‌ರವರು ಸೆ. 30. ರಂದು ಮೈಸೂರಿನಿಂದ ಕರೋಪಾಡಿ ಗ್ರಾಮದ ಬೇತ ಎಂಬಲ್ಲಿಗೆ ಬಂದು ನೋಡಿದಲ್ಲಿ ಮನೆಯ ಮೇಲ್ಚಾವಣಿಯ ಹಂಚುಗಳನ್ನು ಯಾರೋ ಕಳ್ಳರು ತೆಗೆದು ಮನೆಯೊಳಗೆ ಇಳಿದು ಬೆಲೆಬಾಳುವ ತಾಮ್ರ, ಹಿತ್ತಾಳೆ ,ಕಂಚು, ಬೆಳ್ಳಿ ಗ್ಲಾಸ್, ಪಾತ್ರೆ, ಬಿಂದಿಗೆ, ಹಂಡೆ, ಮುಂತಾದ ಸುಮಾರು 62200/- ಮೊತ್ತದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 153/2024 ಕಲಂ: 331(3),331(4),305 ಃಓS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!