- Advertisement -
- Advertisement -





ಕುಂದಾಪುರ: ಗೂಡ್ಸ್ ವಾಹನದಲ್ಲಿ ಕೆಳಗಡೆ ವಿಶೇಷ ಕಂಪಾರ್ಟ್ಮೆಂಟ್ ರಚಿಸಿಕೊಂಡು ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಓರ್ವನನ್ನು ಅಬಕಾರಿ ಪೊಲೀಸರು ತಲ್ಲೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆನಗಳ್ಳಿ ಗ್ರಾಮದ ಕಂಪನತಪ್ಪಲಿನ ನೆಲ್ಸನ್ ಡಿಸೋಜ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 3.26ಲಕ್ಷ ರೂ. ಮೌಲ್ಯದ 20.250 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದು, ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ, ಕುಂದಾಪುರ ವಲಯದ ಅಬಕಾರಿ ಸಿಬ್ಬಂದಿ ರವಿಚಂದ್ರ ನಾಯ್ಕ ಶಂಕ್ರಪ್ಪ ಹಾಗೂ ವಾಹನ ಚಾಲಕ ಚಂದ್ರಶೇಖರ್ ಹಾಜರಿದ್ದರು.
- Advertisement -