Monday, April 29, 2024
spot_imgspot_img
spot_imgspot_img

ಮೈ ಮೇಲೆ ಪಟಾಕಿ ಬಿದ್ದು 4 ವರ್ಷದ ಮಗು ಮೃತ್ಯು

- Advertisement -G L Acharya panikkar
- Advertisement -

ಪಟಾಕಿ ಸಿಡಿದು ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ದುರುಂತ ಘಟನೆ ತಮಿಳುನಾಡಿನ ರಾಣಿಪೇಟ್ ಅಂಬಕ್ಕಂ ಪ್ರದೇಶದಲ್ಲಿ ನಡೆದಿದೆ.

ನಿಮಿಷಾ(4) ಮೃತ ಮಗು. ದೀಪಾವಳಿ ಹಬ್ಬದ ಪ್ರಯುಕ್ತ ನಿಮಿಷಾ ತನ್ನ ತಂದೆ ತಾಯಿಯೊಂದಿಗೆ ರಾಣಿಪೇಟೆಯ ತಮ್ಮ ಊರಿಗೆ ತೆರಳಿದ್ದರು. ಈ ವೇಳೆ ನಿಮಿಷಾ ನೆರೆಹೊರೆಯ ಮಕ್ಕಳು ಜೊತೆ ಸೇರಿಕೊಂಡು ಪಟಾಕಿಗೆ ಬೆಂಕಿ ಹಚ್ಚಿ ಹಬ್ಬವನ್ನು ಆಚರಿಸುತ್ತಿದ್ದಳು.

ಪಟಾಕಿ ಸಿಡಿಸುವಾಗ ಪಟಾಕಿಗಳು ಒಂದರ ನಂತರ ಒಂದರಂತೆ ಮಗುವಿನ ಮೇಲೆ ಬಿದ್ದಿದೆ. ಇದರಿಂದ ಮಗುವಿಗೆ ತೀವ್ರತರದ ಸುಟ್ಟಗಾಯಗಳಾಗಿವೆ. ಕೂಡಲೇ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಎದೆ ಮತ್ತು ಹೊಟ್ಟೆಯ ಭಾಗಗಳಾದ ಸುಟ್ಟಗಾಯಗಳಿಂದಾಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

- Advertisement -

Related news

error: Content is protected !!