Sunday, June 29, 2025
spot_imgspot_img
spot_imgspot_img

ಅಳಕೆ ಮಜಲಿನಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳ ಖದೀಮರು..!

- Advertisement -
- Advertisement -

ಅಳಕೆಮಜಲು ಕೆಮನಾಜೆ ಎಂಬಲ್ಲಿ ಇಂದು ಹಾಡುಹಗಲೇ ಎರಡು ಮನೆಗಳಿಗೆ ಕಳ್ಳರು ನುಗ್ಗಿ ಅಳಕೆಮಜಲು ಕೆಮನಾಜೆ ನಿವಾಸಿ ಪುಷ್ಪರಾಜ್‌‌ ಎಂಬವರ ಮನೆಯಿಂದ ಸುಮಾರು 15 ಪವನ್‌ ಚಿನ್ನ ಮತ್ತು ಕೆಮನಾಜೆ ನಿವಾಸಿ ಕೃಷ್ಣಪ್ಪ ಕುಲಾಲ್‌‌ (ಕುಂಞ್ಞಣ್ಣ) ಎಂಬರ ಮನೆಯಿಂದ ಸುಮಾರು 12 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ನವರಾತ್ರಿಯ ದಿನವಾಗಿದ್ದರಿಂದ ಇಂದು ಅಳಕೆಮಜಲು ಭಜನಾ ಮಂದಿರದಲ್ಲಿ ಮೂರ್ತಿ ಪ್ರತಿಷ್ಠೆಯಾಗಿ ನವರಾತ್ರಿ ಉತ್ಸವದಲ್ಲಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಈ ಸಮಯನ್ನು ದುರುಪಯೋಗಪಡಿಸಿಕೊಂಡ ಕಳ್ಳ ಖದೀಮರು ಮನೆಗೆ ನುಗ್ಗಿ ನಗ-ನಗದು ದೋಚಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಎರಡು ಮನೆಯವರು ಅತೀ ಬಡವರಾಗಿದ್ದು ಚಿನ್ನ ಕಳೆದುಕೊಂಡ ಮನೆ ಹೆಂಗಸು ಮೂರ್ಚೆ ಹೋಗಿದ್ದು ಅವರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ಮನೆಯ ಹಿಂದಿನ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದಾರೆ.

- Advertisement -

Related news

error: Content is protected !!