Tuesday, June 9, 2026
spot_imgspot_img
spot_imgspot_img

ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ

- Advertisement -
- Advertisement -

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅವರು ಈಗ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ನಡೆಸಿಕೊಡುತ್ತಿದ್ದಾರೆ. ಆದರೆ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಈ ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ನೀವೆಲ್ಲರೂ BBK11 ರಲ್ಲಿ ತೋರಿಸಿರುವ ಪ್ರತಿಕ್ರಿಯೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ತೋರಿಸಿದ ಪ್ರೀತಿಯ ಬಗ್ಗೆ ಹಲವರು ಹೇಳುತ್ತಾರೆ. ಇದು ನಮ್ಮೊಂದಿಗೆ ಪ್ರಯಾಣಿಸಿದ 10+1 ವರ್ಷದ ಶ್ರೇಷ್ಠ ಅನುಭವವಾಗಿತ್ತು…, ಮತ್ತು ಈಗ ನಾನು ನನ್ನ ಮುಂದಿನ ಹೆಜ್ಜೆಗೆ ಸಾಗುವ ಸಮಯವಾಗಿದೆ….

ಇದು BBK ಯಲ್ಲಿನ ನನ್ನ ಕೊನೆಯ ಆವೃತ್ತಿಯಾಗಲಿದೆ… ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು ಮತ್ತು ಈ ವರ್ಷಗಳಲ್ಲಿ BB ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ… ಈ ಆವೃತ್ತಿಯನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸೋಣ… ಎಂದು ಕಿಚ್ಚ ಸುದೀಪ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

- Advertisement -

Related news

error: Content is protected !!