Tuesday, June 9, 2026
spot_imgspot_img
spot_imgspot_img

ಸ್ಕೂಟರ್‌ಗೆ ಅಪರಿಚಿತ ವಾಹನ ಢಿಕ್ಕಿ; ಇಬ್ಬರು ಸಾವು..!

- Advertisement -
- Advertisement -

ಹುಬ್ಬಳ್ಳಿ: ಸ್ಕೂಟರ್‌ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಗರದ ಹೊರವಲಯದ ತಾರಿಹಾಳದ ಗೋಕುಲ ಗ್ರಾಮದ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹನುಮಂತ ದೇವಸ್ಥಾನ ಹತ್ತಿರದಿಂದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ಬೈಪಾಸ್ ಮೂಲಕ ಸ್ಕೂಟಿಯಲ್ಲಿ ಬರುತ್ತಿದ್ದ ಇಬ್ಬರ ಮೇಲೆ ಅಪರಿಚಿತ ವಾಹನಗಳು ಹರಿದಿದೆ ಎನ್ನಲಾಗುತ್ತಿದ್ದು ದೇಹಗಳು ರಸ್ತೆ ಮಧ್ಯೆ ಛಿದ್ರವಾಗಿ ಬಿದ್ದಿವೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Related news

error: Content is protected !!