Wednesday, June 24, 2026
spot_imgspot_img
spot_imgspot_img

ಆಂಬ್ಯುಲೆನ್ಸ್ ನಲ್ಲೆ ಪಿಎಸ್‌ಸಿ ಪರೀಕ್ಷೆ ಬರೆದ ಯುವತಿ!!

- Advertisement -
- Advertisement -

ತಿರುವನಂತಪುರ: ಕೊರೋನಾ ಸೋಂಕಿತ ಯುವತಿಯೊಬ್ಬರು ಮಂಗಳವಾರ ಆಂಬ್ಯುಲೆನ್ಸ್ ನಲ್ಲೆ ಸಾರ್ವಜನಿಕ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆ ಬರೆದಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ.

ಪರೀಕ್ಷೆ ಎದುರಿಸಲು ಆಂಬ್ಯುಲೆನ್ಸ್ ಸೂಕ್ತ ಸ್ಥಳವಾಗಿರದಿದ್ದರೂ, ಪಿಎಸ್‌ಸಿ ಅಭ್ಯರ್ಥಿ ಗೋಪಿಕಾ ಗೋಪನ್ ಆಂಬುಲೆನ್ಸ್‌ನಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾರೆ. ಕೇರಳ ಲೋಕಸೇವಾ ಆಯೋಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಗೋಪಿಕಾ ಗೋಪನ್ ಅವರಿಗೆ ಪರೀಕ್ಷೆ ಮುಂಚಿನ ದಿನ ಅಂದರೆ , ಶನಿವಾರ(ಅ.31) ಕೊರೋನಾ ಸೋಂಕು ದೃಢಪಟ್ಟಿತ್ತು.


ಈ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಶಾಲೆಯ ಸಮೀಪ ನಿಲ್ಲಿಸಲಾದ ಆಂಂಬ್ಯುಲೆನ್ಸ್ ಒಳಗೆ ಪರೀಕ್ಷೆ ಬರೆಯಲು ಗೋಪಿಕಾ ಗೋಪನ್ ಅವರಿಗೆ ಡೆಸ್ಕ್‌ನ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಿಕಾ ಗೋಪನ್, ಒಮ್ಮೆ ನೀವು ಪರೀಕ್ಷೆ ಬರೆಯಲು ಆರಂಭಿಸಿದರೆ, ಸ್ಥಳ ಅಷ್ಟೇನೂ ಮುಖ್ಯ ಅಂತ ಅನ್ನಿಸುವುದಿಲ್ಲ ಎಂದಿದ್ದಾರೆ.


ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆ ಎದುರಿಸಲು ಆಂಬುಲೆನ್ಸ್ ಸೂಕ್ತ ಸ್ಥಳವಾಗಿರದಿದ್ದರೂ, ಪಿಎಸ್‌ಸಿ ಅಭ್ಯರ್ಥಿ ಗೋಪಿಕಾ ಗೋಪನ್ ಆಂಬುಲೆನ್ಸ್‌ನಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾರೆ. ಕೇರಳ ಲೋಕಸೇವಾ ಆಯೋಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಗೋಪಿಕಾ ಗೋಪನ್ ಅವರಿಗೆ ಪರೀಕ್ಷೆ ಮುಂಚಿನ ದಿನ ಅಂದರೆ , ಶನಿವಾರ(ಅ.31) ಕೊರೋನಾ ಸೋಂಕು ದೃಢಪಟ್ಟಿತ್ತು.


ಈ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಶಾಲೆಯ ಸಮೀಪ ನಿಲ್ಲಿಸಲಾದ ಆಂಬುಲೆನ್ಸ್‌ನ ಒಳಗೆ ಪರೀಕ್ಷೆ ಬರೆಯಲು ಗೋಪಿಕಾ ಗೋಪನ್ ಅವರಿಗೆ ಡೆಸ್ಕ್‌ನ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಿಕಾ ಗೋಪನ್, ಒಮ್ಮೆ ನೀವು ಪರೀಕ್ಷೆ ಬರೆಯಲು ಆರಂಭಿಸಿದರೆ, ಸ್ಥಳ ಅಷ್ಟೇನೂ ಮುಖ್ಯ ಅಂತ ಅನ್ನಿಸುವುದಿಲ್ಲ ಎಂದಿದ್ದಾರೆ.

- Advertisement -

Related news

error: Content is protected !!