- Advertisement -
- Advertisement -
ಮನೆಯಿಂದ ಆರೋಪಿಯನ್ನು ವಶಕ್ಕೆ ಪಡೆದ ಬೆಳ್ಳಾರೆ ಪೋಲಿಸರು




ಪುತ್ತೂರು: ಬಿಲ್ಲವ ಸಮಾಜದ ಹೆಣ್ಣುಮಕ್ಕಳ ಬಗ್ಗೆ ಮತ್ತು ಭಜನೆ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಬಗ್ಗೆ ಕೀಳುಮಟ್ಟದ ಪದ ಬಳಸಿ ಅವಮಾನ ಮಾಡಿರುವುವ ಆರೋಪದ ಮೇರೆಗೆ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಭಜನೆ ಮಾಡುವ ಮೂಲಕ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಹಿಂದೂ ಸಂಘಟನೆಯ ಮುಖಂಡರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ಸಂಜೀವ ಪೂಜಾರಿಯವರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದೀಗ ಬೆಳ್ಳಾರೆ ಪೊಲೀಸರು ಆರೋಪಿ ಸಂಜೀವ ಪೂಜಾರಿಯವರನ್ನು ಮನೆಯಿಂದಲೇ ಬಂಧಿಸಿದ್ದಾರೆ.
- Advertisement -








