Saturday, June 28, 2025
spot_imgspot_img
spot_imgspot_img

ಕಾಪು: ಯುವತಿ ನಾಪತ್ತೆ : ಪ್ರಕರಣ ದಾಖಲು

- Advertisement -
- Advertisement -

ಕಾಪು: ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ಯುವತಿ ದಿಢೀರ್ ನಾಪತ್ತೆಯಾದ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ವರದಿಯಾಗಿದೆ.

ನಾಪತ್ತೆಯಾದ ಯುವತಿಯನ್ನು ಅಚ್ಚಡ ನಿವಾಸಿ ಶಶಿಕಲಾ (19) ಎಂದು ಗುರುತಿಸಲಾಗಿದೆ.

ಉಡುಪಿ ಕಾಲೇಜೊಂದರ ಬಿಕಾಂ ವಿದ್ಯಾರ್ಥಿನಿಯಾಗಿರುವ ಶಶಿಕಲಾ , ಗುರುವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡುತ್ತಿದ್ದ ಆಕೆ ಊಟ ಮಾಡುತ್ತಿದ್ದಾಗಲೇ ಹೊರಗೆ ಬಂದಿದ್ದು, ಅಲ್ಲಿಂದಲೇ ದಿಢೀರ್ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗಿದೆ. ತಾಯಿ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಲಿಲ್ಲ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!