Sunday, June 29, 2025
spot_imgspot_img
spot_imgspot_img

ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಗ್ಲೈಡರ್- ಪ್ರವಾಸಿಗ ಮೃತ್ಯು

- Advertisement -
- Advertisement -

ಶಿಮ್ಲಾ: ಪ್ಯಾರಾಗ್ಲೈಡರ್ ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಪರಿಣಾಮ ಜೆಕ್‌ನ ಪ್ರವಾಸಿಗರೊಬ್ಬರು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಡಿಟಾ ಮಿಸುರ್ಕೋವಾ (43) ಎಂದು ಗುರುತಿಸಲಾಗಿದೆ.

ಡಿಟಾ ಮಿಸುರ್ಕೋವಾ ಅವರು ಹಾರಾಡುತ್ತಿದ್ದ ಪ್ಯಾರಾಗ್ಲೈಡರ್ ಮನಾಲಿಯ ಮರ್ಹಿ ಬಳಿ ಪರ್ವತಕ್ಕೆ ಅಪ್ಪಳಿಸಿದೆ. ಬಲವಾದ ಗಾಳಿಯಿಂದಾಗಿ ಅವರು ಹಾರಾಡುತ್ತಿದ್ದ ಗ್ಲೈಡರ್ ನಿಯಂತ್ರಣ ಕಳೆದುಕೊಂಡಿದೆ ತಿಳಿದು ಬಂದಿದೆ.

ಅವಘಡದ ಬಳಿಕ ಡಿಟಾ ಮಿಸುರ್ಕೋವಾ ಅವರನ್ನು ತಕ್ಷಣವೇ ಮನಾಲಿಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಿಸುರ್ಕೋವಾ ಕಳೆದ ಆರು ವರ್ಷಗಳಿಂದ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದರು.

- Advertisement -

Related news

error: Content is protected !!