Sunday, June 21, 2026
spot_imgspot_img
spot_imgspot_img

ಬೆಂಗಳೂರಿನಲ್ಲಿ ಲಾರಿ- ಬೈಕ್‌‌ ನಡುವೆ ಅಪಘಾತ; ಬೆಳ್ತಂಗಡಿ ಯುವಕ ಸಾವು..!

- Advertisement -
- Advertisement -

ಬೆಂಗಳೂರು: ಲಾರಿ ಹಾಗೂ ಬೈಕ್‌‌ ಮಧ್ಯೆ ಅಪಘಾತದಲ್ಲಿ ಬೆಳ್ತಂಗಡಿಯ ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ಯುವಕ ಇಂದಬೆಟ್ಟು ಗ್ರಾಮದ ವಸಂತ ಗೌಡ ರವರ ಪುತ್ರ ತುಷಾರ್ (22) ಎಂದು ಗುರುತಿಸಲಾಗಿದೆ.

ತುಷಾರ್ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದು, ರಾತ್ರಿ ವೇಳೆ ಬೈಕ್‌ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.

ಬೈಕ್‌ನಲ್ಲಿದ್ದ ಇನೋರ್ವ ವ್ಯಕ್ತಿ ಬೆಳಾಲು ನಿವಾಸಿ ಸೃಜನ್ ಸುರುಳಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಯಲಹಂಕ ನ್ಯೂ ಟೌನ್‌‌ ಟ್ರಾಫಿಕ್‌ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!