Saturday, May 18, 2024
spot_imgspot_img
spot_imgspot_img

ಉಡುಪಿ: ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಗುಂಡು ಹಾರಾಟ, ಓರ್ವ ಗಾಯ..!

- Advertisement -G L Acharya panikkar
- Advertisement -

ಉಡುಪಿ : ಉಡುಪಿಯ ಪ್ರಸಿದ್ಧ ಬಟ್ಟೆ‌ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯಲ್ಲಿ ಫೈರಿಂಗ್ ಆಗಿದ್ದು ಘಟನೆಯಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಗಾಯಾಳು ಸಿಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಯೊಳಗೆ ವಾರಸುದಾರರಿಲ್ಲದ ರಿವಾಲ್ವರ್‌ ಪತ್ತೆಯಾಗಿದೆ. ರಿವಾಲ್ವರ್ ನೋಡಿ‌ ಸಿಬ್ಬಂದಿಗಳು ಆಶ್ಚರ್ಯ ಚಕಿತರಾಗಿ ಅದನ್ನು ನೋಡಲು ಹೋಗಿ ಅಕಸ್ಮಾತ್ ಗುಂಡು ಸಿಡಿದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್ ಯಾರಿಗೆ ಸೇರಿದ್ದು, ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!