ನ್ಯೂಜಿಲೆಂಡ್: ನ್ಯೂಜಿಲೆಂಡ್ ಸರ್ಕಾರದಲ್ಲಿ ಭಾರತೀಯ ಮೂಲದ ಮಹಿಳೆ ಪ್ರಿಯಾಂಕ ರಾಧಕೃಷ್ಣ ಇದೇ ಮೊಟ್ಟ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಸತ್ ಉದ್ದೇಶಿಸಿ ಮಾತನಾಡಿರುವ ಪ್ರಿಯಾಂಕ ತಮ್ಮ ಮಾತೃಭಾಷೆಯನ್ನ ಸಂಸತ್ನಲ್ಲಿ ಪ್ರಸ್ತಾಪ ಮಾಡಿ ಭಾಷಣ ಆರಂಭಿಸಿದ್ದಾರೆ.
ಮಲಯಾಳಂ ಭಾಷೆಯಲ್ಲಿ ತಮ್ಮ ಮಾತನ್ನ ಆರಂಭಿಸಿ ಮಾತನಾಡುತ್ತಿರುವ ದೃಶ್ಯದ ತುಣುಕನ್ನ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
41 ವರ್ಷದ ಪ್ರಿಯಾಂಕ ರಾಧಾಕೃಷ್ಣನ್ ಭಾರತದಲ್ಲಿ ಜನಿಸಿ ಶಿಕ್ಷಣಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿ ತಮ್ಮ ಶಿಕ್ಷಣವನ್ನ ಮುಗಿಸಿಕೊಂಡು ನ್ಯೂಜಿಲೆಂಡ್ನಲ್ಲಿ ನೆಲೆಸಿದ್ದಾರೆ ಅಂತಾ ಮಾಧ್ಯಮಗಳು ವರದಿ ಮಾಡಿವೆ. ಸೆಪ್ಟೆಂಬರ್ 2017 ರಲ್ಲಿ ಅಲ್ಲಿನ ಲೇಬರ್ ಪಕ್ಷಕ್ಕೆ ಸೇರಿ ಪ್ರಿಯಾಂಕ ಆಯ್ಕೆ ಆಗಿದ್ದಾರೆ.
Doing India proud, the Indian origin minister in New Zealand @priyancanzlp addresses her country's parliament in Malayalam.@IndiainNZ @NZinIndia @VMBJP @MEAIndia pic.twitter.com/f3yUURW2Em
— Hardeep Singh Puri (@HardeepSPuri) November 5, 2020
ಮೂರು ವರ್ಷಗಳ ನಂತರ ಪ್ರಧಾನಿ ಜಸಿಂಡಾ ಅರ್ಡೇರ್ನ್ ಇತ್ತೀಚೆಗಷ್ಟೇ ತಮ್ಮ ಸಂಪುಟಕ್ಕೆ 5 ಹೊಸ ಮಂತ್ರಿಗಳನ್ನ ಸೇರಿಸಿಕೊಂಡಿದ್ದಾರೆ. ಅವರಲ್ಲಿ ಪ್ರಿಯಾಂಕ ರಾಧಾಕೃಷ್ಣ ಕೂಡ ಒಬ್ಬರಾಗಿದ್ದಾರೆ. ಇವರ ಮಾತೃಭಾಷೆ ಪ್ರೇಮಕ್ಕೆ ದೇಶದೆಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.