- Advertisement -
- Advertisement -


ಪುತ್ತೂರು: ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಗೇರು ನೆಡುತೋಪು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡವರು.
ಬೆಳಗಿನ ಜಾವ ವ್ಯಕ್ತಿಯೊಬ್ಬರು ಹಾಲು ಕೊಂಡೊಯ್ಯುವ ಸಂದರ್ಭದಲ್ಲಿ ಪಕ್ಕದ ಕಾಡಿನಿಂದ ಮೊಬೈಲ್ ರಿಂಗಣಿಸುವ ಶಬ್ದ ಕೇಳಿಸಿ ಅದನ್ನು ಆಲಿಸಿಕೊಂಡು ಆ ಸ್ಥಳಕ್ಕೆ ತೆರಳಿದಾಗ ಯೋಗೀಶ್ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
- Advertisement -








