Monday, June 30, 2025
spot_imgspot_img
spot_imgspot_img

ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ 5 ಟನ್‌ ಮಾದಕ ವಸ್ತು ಕೋಸ್ಟ್ ಗಾರ್ಡ್ ವಶಕ್ಕೆ

- Advertisement -
- Advertisement -

ಪೋರ್ಟ್ ಬ್ಲೇರ್: ಅಂಡಮಾನ್‌ನಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಸುಮಾರು 5 ಟನ್ ಮಾದಕ ವಸ್ತುವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದುಕೊಂಡಿದೆ.

ನವೆಂಬರ್‌ನ ಆರಂಭದಲ್ಲಿ ಗುಜರಾತ್‌ನ ಕರಾವಳಿಯಲ್ಲಿ ಅಧಿಕಾರಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಇದನ್ನು ಸಾಗಿಸುತ್ತಿದ್ದ 8 ಇರಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು.

ಆದರೆ ಇದೀಗ ಸುಮಾರು 5 ಟನ್ ಮಾದಕ ವಸ್ತುವನ್ನು ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದ್ದಿ, ಇದುವರೆಗೆ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡ ಮಾದಕ ವಸ್ತುವಿನಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಗೆ ಭಾರತ ‘ಸಾಗರ್ ಮಂಥನ್ – 4’ ಎಂಬ ಗುಪ್ತಚರ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಅಂಗವಾಗಿ ನೌಕಾಪಡೆಯು ಭಾರತದ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಮತ್ತು ದೋಣಿಗಳ ಮೇಲೆ ನಿಗಾ ವಹಿಸುತ್ತದೆ.

- Advertisement -

Related news

error: Content is protected !!