Thursday, October 1, 2026
spot_imgspot_img
spot_imgspot_img

ಕುಕ್ಕೆಸುಬ್ರಹ್ಮಣ್ಯ: ಇಂದು(ನ.27) ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ಕುಕ್ಕೆ ಜಾತ್ರೋತ್ಸವ ಆರಂಭ

- Advertisement -
- Advertisement -

ಕುಕ್ಕೆಸುಬ್ರಹ್ಮಣ್ಯ: ಕಾರ್ತಿಕ ಬಹುಳ ದ್ವಾದಶಿಯಾದ ನ.27ರಂದು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ಕುಕ್ಕೆ ಜಾತ್ರೋತ್ಸವ ಆರಂಭವಾಗಲಿದೆ.

ಎಲ್ಲ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತದೆ.ಬುಧವಾರ ಬೆಳಗ್ಗೆ 7ರಿಂದ 9ಗಂಟೆ ಒಳಗಿನ ಶುಭಮುಹೂರ್ತದಲ್ಲಿ ರಾಮ ಲಕ್ಷ್ಮಣ ಎಂಬ ಜೊಡಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ರಾಮ ಲಕ್ಷ್ಮಣ ಎಂಬ ಎರಡು ದೊಡ್ಡ ಕೊಪ್ಪರಿಗೆಗಳನ್ನು ಏರಿಸಲಾಗುತ್ತದೆ. ಅಕ್ಷಯ ಪಾತ್ರೆ ಎಂದೇ ಕರೆಯುವ ಈ ಕೊಪ್ಪರಿಗೆಗಳಿಗೆ ಪೂಜೆಗಳು ನೆರವೇರುತ್ತದೆ. ಇದು ಶ್ರೀಕ್ಷೇತ್ರದ ಅನ್ನದಾನದ ಸಂಕೇತವೂ ಹೌದು ಎಂಬುದಾಗಿ ನಂಬಲಾಗಿದೆ.ಕೊಪ್ಪರಿಗೆ ಅಂದರೆ ದೊಡ್ಡದಾದ ಅನ್ನದ ಪಾತ್ರೆ (ದೊಡ್ಡ ಕಟಾರ). ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಯ ಮೇಲೆ ದೊಡ್ಡ ದೊಡ್ಡ ಎರಡು ಅನ್ನದ ಕೊಪ್ಪರಿಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುಮೂಹರ್ತದಲ್ಲಿ ಏರಿಸಲಾಗುತ್ತದೆ.ಭಜನೋತ್ಸವ: ವಾರ್ಷಿಕ ಚಂಪಾಷಷ್ಠಿ ಆರಂಭದ ದಿನವಾದ ಬುಧವಾರ ಅಖಂಡ ಭಜನೋತ್ಸವ ನೆರವೇರಲಿದೆ. ಮುಂಜಾನೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಪ್ರಾತಃಕಾಲ 6ಗಂಟೆಯಿಂದ ನಿರಂತರವಾಗಿ ಗುರುವಾರ ಮುಂಜಾನೆ 6ಗಂಟೆಯವರೆಗೆ ನೆರವೇರಲಿದೆ. ಈ ಅಖಂಡ ಭಜನೋತ್ಸವದಲ್ಲಿ 24 ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ.

- Advertisement -

Related news

error: Content is protected !!