Saturday, August 1, 2026
spot_imgspot_img
spot_imgspot_img

ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಿ ಜನ ಸಾಮನ್ಯರಿಗೆ ನ್ಯಾಯ ಒದಗಿಸಿಕೊಡಬೇಕು:- ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷರು ಹರೀಶ್ ಬಿಜತ್ರೆ ಆಗ್ರಹ

- Advertisement -
- Advertisement -

ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಿ ಜನ ಸಾಮನ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕೆನುವಂತೆ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷರು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಬಿಜತ್ರೆ ಆಗ್ರಹಿಸಿದ್ದಾರೆ.

ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಪುತ್ತೂರಿನ ಶಾಸಕರು ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಉತ್ತರಕುಮಾರನ ಪೌರುಷ ಕೇವಲ ಗಾಳಿ ಮಾತಾಗಿದೆ ಹೊರತು ಯಾವುದೇ ಪ್ರಯೋಜನವಾಗಲಿಲ್ಲ ಬದಲಾಗಿ ಶಾಸಕರು ಮಾತು ಕೇಳುವಾಗ ನಾನು ಹೊಡೆದಂತೆ ಮಾಡುತ್ತೇನೆ ನೀವು ಕೂಗಿದಂತೆ ನಟಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೋ ಎಂದು ಅರ್ಥವಾಗುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಮತ್ತು ಕೆಲವು ಸಂಪುಟ ಸಚಿವರು ಹಗರಣದಲ್ಲಿ ಸಿಲುಕಿ ನಂತರ ಕದ್ದ ಮಾಲನ್ನು ಹಿಂತುರಿಗಿಸಿ ನಾವು ಸಾಚಾಗಳು ಎನ್ನುವ ರೀತಿಯಲ್ಲಿ ಪುತ್ತೂರಿನಲ್ಲಿ ಕೂಡ ಶಾಸಕರ ಮಾತು ಕೇಳುವಾಗ ಅದೇ ರೀತಿಯ ವ್ಯವಸ್ಥೆ ಆಗುತ್ತಾ ಇದೆ ಎಂದು ಸಂಶಯ ಮೂಡುತ್ತಿದೆ. ಕಾರಣ ಜನಸಾಮನ್ಯರಲ್ಲಿ ಹೇಳುತ್ತಾರೆ ಯಾರೇ ಲಂಚ ಕೇಳಿದರು ನನ್ನಲ್ಲಿ ನೇರವಾಗಿ ಹೇಳಿ ಎಂದು ಲಂಚ ತಿಂದ ಇಲಾಖಾ ಅಧಿಕಾರಿಯಲ್ಲಿ ತೆಗೆದುಕೊಂಡ ಹಣವನ್ನು ಹಿಂತುರುಗಿಸಿ ನಿಮ್ಮ ಕೆಲಸ ಮಾಡಿ ಎಂದು! ಇದರ ಅರ್ಥ ಲಂಚ ತೆಗೆದದ್ದು ಗೊತ್ತಾದರೆ ಹಿಂತುರಿಗಿಸಿ ಗೊತ್ತಾಗಿಲ್ಲ ಎಂದರೆ ಜೇಬಿನಲ್ಲಿ ಇರಿಸಿ ಎಂದು ನಿಮ್ಮ ವಾದವೇ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ. ಇನ್ನಾದರೂ ತಾನು 916 ಚಿನ್ನ ಎಂದು ಹೇಳುವ ಶಾಸಕರು ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಿ ಜನ ಸಾಮನ್ಯರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!