Friday, June 27, 2025
spot_imgspot_img
spot_imgspot_img

ಬೆಳ್ಳಾರೆ: ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ; ಪ್ರಕರಣ ದಾಖಲು..!

- Advertisement -
- Advertisement -

ಬೆಳ್ಳಾರೆ : ಮಾದಕವಸ್ತು ಸೇವಿಸಿ ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಮಾಂತೂರು ಎಂಬಲ್ಲಿ ನಡೆದಿದೆ.

ಆರೋಪಿಯನ್ನು ಸವಣೂರು ಗ್ರಾಮ ಕಡಬ ನಿವಾಸಿ ಮಹಮ್ಮದ್ ಫೈಝೀನ್ (34) ಎಂದು ಗುರುತಿಸಲಾಗಿದೆ.

ಡಿ.7 ರಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಮಾಂತೂರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಈರಯ್ಯ ಡಿ ಎನ್ ಪೊಲೀಸ್ ಉಪನಿರೀಕ್ಷಕರು ಬೆಳ್ಳಾರೆ ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳ ಜೊತೆ ತೆರಳಿ ವಿಚಾರಣೆ ನಡೆಸಿದಾಗ ಮಹಮ್ಮದ್ ಫೈಝೀನ್ ಮಾದಕವಸ್ತು ಸೇವನೆ ಮಾಡಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆತ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ . 87/2024 ಕಲಂ 27(b) N.D.P.S Act ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!