Wednesday, July 22, 2026
spot_imgspot_img
spot_imgspot_img

ಪುತ್ತೂರು: (ಡಿ. 22-23) ಬೆದ್ರಾಳ ಕೊರಜಿಮಜಲು ಎಲಿಕಾ ನಾಗ ರಕ್ತೇಶ್ವರೀ ಸೇವಾ ಪ್ರತಿಷ್ಠಾನ(ರಿ.) ನೂತನ ನವೀಕೃತ ಆರೂಢ ಮತ್ತು ದೈವಸ್ಥಾನದಲ್ಲಿ ಶ್ರೀ ನಾಗ ಮತ್ತು ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

- Advertisement -
- Advertisement -

ಪುತ್ತೂರು: ಶ್ರೀ ನಾಗ ರಕ್ತೇಶ್ವರೀ ಸೇವಾ ಪ್ರತಿಷ್ಠಾನ(ರಿ.) ಪುತ್ತೂರು ತಾಲೂಕು ಬೆದ್ರಾಳ-ಕೊರಜಿಮಜಲು-ಎಲಿಕಾ ಎಂಬಲ್ಲಿ ನೂತನ ನವೀಕೃತ ಆರೂಢ ಮತ್ತು ದೈವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಮತ್ತು ವೇದಮೂರ್ತಿ ಕೆಮ್ಮಿಂಜೆ ಶ್ರೀ ವೆಂಕಟಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ಶ್ರೀ ನಾಗ ಮತ್ತು ಶ್ರೀ ರಕ್ತೇರ್ಶಶ್ವರೀ ಸಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಡಿ.22 ಮತ್ತು 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಡಿ. 22-12-2024ನೇ ಆದಿತ್ಯವಾರ ಸಂಜೆ 5ಕ್ಕೆ ತಂತ್ರಿಗಳ ಆಗಮನದ ಬಳಿಕ 6ಕ್ಕೆ ಸಾಮೂಹಿಕ ಪ್ರಾರ್ಥನೆ, ವಿಶ್ವಕರ್ಮ ಪ್ರಾರ್ಥನೆ ನಡೆದು ಶಿಲ್ಪಿಗಳ ಬೀಳ್ಕೊಡುಗೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ ಬಳಿಕ ರಾಕ್ಷೋಘ್ನ ಹೋಮ ನಡೆಯಲಿದೆ. ಬಳಿಕ ವಾಸ್ತುಹೋಮ, ವಾಸ್ತು ಪೂಜಾ ಬಲಿ, ದುರ್ಗಾಸಮಸ್ಕಾರ ಪೂಜೆ, ನೂತನ ಬಿಂಬ ಶುದ್ಧಿ, ಮೃತ್ತಿಕಾಧಿವಾಸ ನಡೆದು ಬಳಿಕ, ಜಲಾಧಿವಾಸ, ಧ್ಯಾನಾಧಿವಾಸ, ಮಹಾಪೂಜೆ, ಪ್ರಾರ್ಥನೆ, ಶೈಯ್ಯಾಧಿವಾಸ ನಡೆಯಲಿದೆ.

ಡಿ. 23-12-2024 ನೇ ಸೋಮವಾರ ಬೆಳಗ್ಗೆ ಗಂಟೆ 7 ರಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾ ಗಣಪತಿ ಹವನ, ಪವಮಾನ ಸೂಕ್ತಾದಿ, ಪ್ರಾಯಶ್ಚಿತ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಬ್ರಹ್ಮ ಕಲಶ ಪ್ರತಿಷ್ಠೆ, ನಡೆಯಲಿದೆ. ನಂತರ ಬೆಳಗ್ಗೆ ಗಂಟೆ 9.18 ರಿಂದ ನಾಗ ಮತ್ತು ರಕ್ತೇಶ್ವರಿ ಸಪರಿವಾರ ಧರ್ಮದೈವಗಳ ಪುನಃ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಿರ್ಣಯ ಪ್ರಾರ್ಥನೆ, ಪಂಚಾಮೃತಾಭಿಷೇಕ, ಸರ್ವ ಪ್ರಾಯಶ್ಚಿತ ಆಶ್ಲೇಷ ಬಲಿ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ವಟು ಬ್ರಾಹ್ಮಣ, ಸುವಾಸಿನಿ ಆರಾಧನೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!