- Advertisement -
- Advertisement -






ಧರ್ಮನಗರ: ಇತಿಹಾಸ ಪ್ರಸಿದ್ಧ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿ. 24 ನೇ ಮಂಗಳವಾರ ಜಿಲ್ಲಯ ಹೆಸರಾಂತ ನೃತ್ಯ ತಂಡ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ನೃತ್ಯ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. 93.5 ರೆಡ್ ಎಫ್ ಎಂ ನ ಆರ್. ಜೆ ಪ್ರಸನ್ನರವರ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮದಲ್ಲಿ ಕರಾವಳಿಯ ಖ್ಯಾತ ಗಾಯಕರಾದ ಉಮೇಶ್ ಕೋಟ್ಯಾನ್ ವಾಮದಪದವು ಹಾಗೂ ಗಾಯಕಿ ಶಿವಪ್ರಿಯಾ ಕಾಮತ್ ಭಾಗವಹಿಸಲಿದ್ದಾರೆ. ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ತಂಡದಿಂದ ವಿವಿಧ ಶೈಲಿಯ ನೃತ್ಯ ಪ್ರದರ್ಶನ ಮೂಡಿಬರಲಿದೆ.
- Advertisement -