Friday, May 20, 2022
spot_imgspot_img
spot_imgspot_img

ವಿಟ್ಲ: ಶ್ರೀ ಮಲರಾಯ ದೈವ ಚಾವಡಿ ಹೊಸಮನೆ, ಪಿಲಿಂಜ – ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ

- Advertisement -
- Advertisement -

ವಿಟ್ಲ : ಶ್ರೀ ಮಲರಾಯಿ ದೈವ ಚಾವಡಿ ಕುಳ ಕುಂಡಡ್ಕ, ಹೊಸಮನೆ, ಪಿಲಿಂಜಿ ಇಲ್ಲಿ ದಿನಾಂಕ 07-05-2022ನೇ ಶನಿವಾರ ದಿಂದ 10-05-2022ನೇ ಮಂಗಳವಾರದ ತನಕ ಮಲರಾಯಿ ದೈವ ಹಾಗೂ ಧೂಮಾವತಿ, ದುಗ್ಗಲಾಯಿ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರಗೊಂಡು ನೂತನ ಚಾವಡಿಯಲ್ಲಿ ಶ್ರೀ ಮಲರಾಯ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಟ್ಲ ಸೀಮೆಯ ತಂತ್ರಿಗಳಾದ ರಘುನಾಥ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ವೈದಿಕ ಕಾರ್ಯಕ್ರಮಗಳು, ಗಣಪತಿ ಹೋಮ, ಬ್ರಹ್ಮಕಲಶಪೂಜೆ, ಶ್ರೀ ಮಲರಾಯ ದೈವದ ನೂತನ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ಜರಗಿತು. ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ ಪಿಲಿಂಜ ಇವರ ನೇತೃತ್ವದಲ್ಲಿ ಹಲವು ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಿತು.

ಶ್ರೀ ಮಲರಾಯಿ ದೈವ ಹಾಗೂ ಧೂಮಾವತಿ, ದುಗ್ಗಲಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಧೂಮಾವತಿ ದೈವದ ನೇಮೋತ್ಸವ ಹಾಗೂ ದೈವದ ಗಂಧಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆಯು ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

- Advertisement -

Related news

error: Content is protected !!