Saturday, June 28, 2025
spot_imgspot_img
spot_imgspot_img

ಹಿಂದೂ ಹೆಸರನ್ನಿಟ್ಟುಕೊಂಡು ಯುವತಿ ಜೊತೆ ಸ್ನೇಹ; ದೈಹಿಕ ಸಂಪರ್ಕ ಬೆಳೆಸಿದ್ದ ವಿಡಿಯೋ ತೋರಿಸಿ ಯುವತಿಗೆ ಬ್ಲ್ಯಾಕ್ ಮೇಲ್..!

- Advertisement -
- Advertisement -

ಹಿಂದೂ ಹೆಸರನ್ನಿಟ್ಟುಕೊಂಡು ಸ್ನೇಹಗಳಿಸಿ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ದೈಹಿಕ ಶೋಷಣೆ ಮಾಡುತ್ತಿದ್ದಾರೆ. ಪ್ರದೀಪ್ ಸೋಲಂಕಿ ಎಂದು ಹೇಳಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಮಾತ್ರವಲ್ಲದೆ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ.

ಮೊಕ್ಸಿನ್ ಎಂಬ ಮುಸ್ಲಿಂ ಯುವಕ ತನ್ನ ಹೆಸರನ್ನು ಪ್ರದೀಪ್ ಎಂದು ಹೇಳಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದಾನೆ. ಪ್ರದೀಪ್ ಸೋಲಂಕಿ ಎಂದು ಹೇಳಿಕೊಂಡು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆರೋಪಿ ಮೂರು ವರ್ಷಗಳಿಂದ ತನ್ನ ಹೆಸರನ್ನು ಬದಲಾಯಿಸಿಕೊಂಡು ಲೈಂಗಿಕವಾಗಿ ಶೋಷಿಸುತ್ತಿದ್ದ. ಸಂತ್ರಸ್ತೆ ಕುಟುಂಬ ಸಮೇತ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತೆಯ ಸುನೀತಾ ಜಮ್ರೆಯ ಮೂಲಕ ಮೊಕ್ಸಿನ್ ಮುಲ್ತಾನಿ ಎಂಬಾತನ ಪರಿಚಯವಾಗಿದೆ. ಗೆಳತಿ ಆತನನ್ನು ಹಿಂದೂ ಹುಡುಗ ಎಂದು ಕರೆದು ವಂಚಿಸಿದ್ದಾರೆ. ಸ್ನೇಹಿತರಾದ ನಂತರ, ಮೊಕ್ಸಿನ್ ದೈಹಿಕ ಸಂಪರ್ಕ ಬೆಳೆಸಿ ವೀಡಿಯೊ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ವೀಡಿಯೊವನ್ನು ವೈರಲ್‌ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಮದುವೆಯಾಗುವಂತೆ ಒತ್ತಾಯಿಸಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರದೀಪ್ ಅಲಿಯಾಸ್ ಮೊಕ್ಸಿನ್ ತನ್ನನ್ನು ಖಾರ್ಗೋನ್ ಜಿಲ್ಲೆಯ ಕಾಸ್ರವಾಡ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ನಿಜವಾಗಿ ಆತ ಧಾರ್ ಜಿಲ್ಲೆಯ ಮನವಾರ್ ನಿವಾಸಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬಕ್ಕೆ ಈ ವಿಷಯ ತಿಳಿದ ನಂತರ ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಕೂಡ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಸೇನೆ ಹಾಗೂ ಇತರ ಹಿಂದೂ ಸಂಘಟನೆಗಳ ಸದಸ್ಯರು ಕೊತ್ವಾಲಿ ಠಾಣೆಗೆ ಆಗಮಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!