Saturday, June 28, 2025
spot_imgspot_img
spot_imgspot_img

ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನ: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ವಿಟ್ಲ(ನ.11): ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್‍ ನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ಮೆಲ್ಕಾರ್‍ ಬಸ್ಸು ನಿಲ್ದಾಣದ ಬಳಿ ನಿಂತಿದ್ದ ಬ್ರೀಜಾ ಕಾರನ್ನು ಕಂಡು ಅದರಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಿಚಾರಿಸಿದಾಗ ಆರೋಪಿಗಳು ಮಾನಸ ಟವರ್‌ ಎದುರುಗಡೆ ಆರೋಪಿಗಳಾದ ಟಿ.ಪಿ ಫರೂಕ್ (50) ಮತ್ತು ಸಾಗರ್ ಸಿಂಗ್ (22)ನನ್ನು ವಿಚಾರಿಸಿದಾಗ ಮಂಗಳೂರು ಪಿಜಿಯಲ್ಲಿ ವಾಸವಿರುವುದಾಗಿ ತಿಳಿಸಿದ್ದು.

ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದು ಬಳಿಕ ಆರೋಪಿಗಳ ವಶದಲ್ಲಿದ್ದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 10,32,900/- ಆಗಿರುತ್ತದೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.


ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ ಪೊಲೀಸ್‍ ನಿರೀಕ್ಷರಾದ ಶ್ರೀ ಚೆಲುವರಾಜು ಬಿ ರವರ ನೇತ್ರತ್ವದಲ್ಲಿ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್‍ ಎಂ, ತಾರಾನಾಥ್‍, ಪ್ರವೀಣ್‍ ರೈ, ಶೋನ್‍ಶಾ, ಸುರೇಶ್‍ ರವರು ಭಾಗವಹಿಸಿದ್ದರು. ತಾಂತ್ರಿಕ ವಿಭಾಗದ ಸಂಪತ್‍ ಮತ್ತು ದಿವಾಕರ್ ಸಹಕರಿಸಿರುತ್ತಾರೆ.

- Advertisement -

Related news

error: Content is protected !!