Friday, June 27, 2025
spot_imgspot_img
spot_imgspot_img

ಭಾರೀ ಕುತೂಹಲದತ್ತ ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಫಲಿತಾಂಶ

- Advertisement -
- Advertisement -

ಕೈ ಪಾಳಯದೊಂದಿಗೆ ಬಿಜೆಪಿ ಓವರ್‌ ಟೇಕ್‌..! ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನದಲ್ಲಿ ಮುನ್ನಡೆ

ಕೋರ್ಟ್ ನಿರ್ದೇಶನ ನೀಡಿದ್ದ ಮತಗಳು ಸೇರ್ಪಡೆಯಾದಲ್ಲಿ ಎರಡು ಸೀಟ್‌ ಕಾಂಗ್ರೇಸ್‌ ದಕ್ಕೆಗೆ

ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಿನ್ನೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನದಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. 1200 ಮತಗಳ ಪೈಕಿ ಶೇಕಡಾ 85/- ಮತಚಲಾವಣೆ ಆಗಿರುತ್ತದೆ. ಇನ್ನೂ ಕೋರ್ಟ್‌ ಆದೇಶದ ಮೇರೆಗೆ 300 ಮತದಾರರಿಗೆ ಹಕ್ಕು ಚಲಾವಣೆಯ ಅಧಿಕಾರ ನೀಡಿದ್ದು, 136 ಮತದಾರರು ಮತಚಲಾವಣೆ ಮಾಡಿದ್ದಾರೆ. ಕೋರ್ಟ್ ನಿರ್ದೇಶನ ನೀಡಿದ್ದ ಮತಗಳು ಸೇರ್ಪಡೆಯಾದಲ್ಲಿ 11 ಬಿಜೆಪಿ ಬೆಂಬಲಿತರು ಹಾಗೂ ಇಬ್ಬರು ಕಾಂಗ್ರೇಸ್‌ ಬೆಂಬಲಿತ ಅರ್ಭ್ಯರ್ಥಿಗಳು ಮೇಲುಗೈ ಸಾಧಿಸಬಹುದು ಎಂಬ ಮಾಹಿತಿ ಇದೆ. ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಗದ್ದುಗೆಯ ಫಲಿತಾಂಶ ಈಗಾಗಲೇ ಬಂದಿದ್ದು, ಕೋರ್ಟ್ ಆದೇಶವನ್ನು ಕಾದುನೋಡಬೇಕಿದೆ.

- Advertisement -

Related news

error: Content is protected !!