Monday, June 30, 2025
spot_imgspot_img
spot_imgspot_img

ವಂಚನೆ ಪ್ರಕರಣದ ಪ್ರಮುಖ ಆರೋಪಿ ಬಂಧನ

- Advertisement -
- Advertisement -

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ CEN ಪೊಲೀಸ್ ಠಾಣೆಯಲ್ಲಿ 16/2024 ಕಲಂ 66(D) act and 417,420 IPC ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನವಿ ಮುಂಬಯಿ, ಮಹಾರಾಷ್ಟ್ರ ನಿವಾಸಿ ಅತುಲ್ ತ್ರಿಪಾಠಿ (29) ಎಂದು ಗುರುತಿಸಲಾಗಿದೆ.

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಶ್ರೀ ಮಂಜುನಾಥ ಆರ್.ಜಿ ಪೊಲೀಸ್‌‌ ಉಪಾಧೀಕ್ಷಕರು, ಇವರ ನೇತೃತ್ವದಲ್ಲಿ ಪಿ.ಎಸ್.ಐ ಮಜುನಾಥ ಟಿ, ಹೆಚ್.ಸಿ. ಗಳಾದ ಪುನೀತ್ ಕುಮಾರ್, ಅಜಿತ್ ಬಂಗೇರ ಮತ್ತು ಪಿ ಸಿ ದರ್ಶನ್ ಬಿ.ಎನ್ ಇವರುಗಳು ತಂಡ, ಆರೋಪಿ ಅತುಲ್ ತ್ರಿಪಾಠಿ ಎಂಬಾತನನ್ನು ಜ.20ರಂದು ಮುಂಬೈ ನಲ್ಲಿ ದಸ್ತಗಿರಿ ಮಾಡಿ ಜ.21 ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

- Advertisement -

Related news

error: Content is protected !!