Saturday, September 12, 2026
spot_imgspot_img
spot_imgspot_img

ಕಾರ್ಕಳ: ಮಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದ ಯುವತಿ ನಾಪತ್ತೆ

- Advertisement -
- Advertisement -

ಕಾರ್ಕಳ : ಮಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದ ಯುವತಿ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ಜ. 19 ರಂದು ಸಂಭವಿಸಿದೆ. ಸಂಗೀತಾ (22) ನಾಪತ್ತೆಯಾದವರು.

ಮೂಲತ: ಉತ್ತರ ಕನ್ನಡ ಜಿಲ್ಲೆಯ ಮುಂಡುಗೋಡು ತಾಲೂಕು ಶೀಡ್ಲಗುಂಡಿ ಗ್ರಾಮದವರಾದ ಇವರು ಜ. 19ರಂದು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಜೋಗುಳಬೆಟ್ಟು ಎಂಬಲ್ಲಿ ವಾಸವಿರುವ ಚಿಕ್ಕಪ್ಪನ ಮನೆಗೆ ಬಂದಿದ್ದು ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ಆದರೆ ಆ ಬಳಿಕ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ 08258-230213, 233100 ಅಥವಾ 9480805461 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

- Advertisement -

Related news

error: Content is protected !!