- Advertisement -
- Advertisement -




ರಾಯಚೂರು: ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಅಮ್ಮನ ಜೀವ ಉಳಿಸಲು ಹೋದ 12 ವರ್ಷದ ಬಾಲಕ ತನ್ನ ಚಿಕ್ಕಪ್ಪನಿಂದಲೇ ಚಾಕುವಿನಿಂದ ಇರಿಯಲ್ಪಟ್ಟು ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಬಾಲಕನ ತಂದೆ ಮತ್ತು ಚಿಕ್ಕಪ್ಪನ ನಡುವೆ ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಜಗಳವಿತ್ತು. ಆಸ್ತಿ ವಿಚಾರವಾಗಿ ಮಾತಿನ ಚಕಮಕಿ ನಡೆದಾಗ, ಚಿಕ್ಕಪ್ಪ ತನ್ನ ಅತ್ತಿಗೆಗೆ(ಬಾಲಕನ ತಾಯಿ) ಚಾಕುವಿನಿಂದ ಇರಿಯಲು ಮುಂದಾಗಿದ್ದು, ಈ ವೇಳೆ ತಾಯಿಯನ್ನು ರಕ್ಷಿಸಲು ಅಡ್ಡಬಂದ 12 ವರ್ಷದ ಬಾಲಕನಿಗೆ ಚಾಕು ತಗುಲಿದೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಬಾಲಕನ ತಾಯಿ ತೀವು ಆಘಾತಗೊಂಡಿದ್ದು, ಮಗನ ಕಳೆದುಕೊಂಡು ಗೋಳಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.
- Advertisement -








