Monday, June 15, 2026
spot_imgspot_img
spot_imgspot_img

ಉಡುಪಿ: ವೇಶ್ಯಾವಾಟಿಕೆ ದಂಧೆಗೆ ಪೊಲೀಸ್‌ ದಾಳಿ; ಮಹಿಳೆಯ ರಕ್ಷಣೆ..!

- Advertisement -
- Advertisement -

ಉಡುಪಿ: ನಗರದ ವಸತಿಗೃಹ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಯುತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿದ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಉಡುಪಿಯ ಸೆನ್‌ ಠಾಣೆಯ ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಕೇಶವ ಎನ್ನುವಾತ ಶಿವಮೊಗ್ಗ ಮೂಲದ ಮಹಿಳೆಯನ್ನು ಕೆಲಸ ಕೊಡುವುದಾಗಿ ನಂಬಿಸಿ ಹೊಟೇಲ್‌ನಲ್ಲಿ ಆಕೆಯನ್ನು ಬಲವಂತವಾಗಿ ಅನೈತಿಕ ಚಟುವಟಿಕೆಗೆ ದೂಡಿದ ಆರೋಪ ಬೆಳಕಿಗೆ ಬಂದದಿದೆ.

ದಾಳಿ ವೇಳೆ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಕೃತ್ಯಕ್ಕೆ ಹೊಟೇಲ್‌ನಲ್ಲಿ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಾಲಕರ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!