- Advertisement -
- Advertisement -
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಭರ್ಜರಿ ಜಯಬೇರಿ ಬಾರಿಸಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಮಾತ್ರ ಇನ್ನೂ ಅಧಿಕೃತವಾಗಿ ತಮ್ಮ ಸೋಲನ್ನ ಒಪ್ಪಿಕೊಂಡಿಲ್ಲ.
ಈ ನಡುವೆ ಚುನಾವಣೆಯ ಫಲಿತಾಂಶವನ್ನ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ವಾಷಿಂಗ್ಟನ್ ಡಿ.ಸಿಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ನೆರೆದು ಮತ್ತೆ 4 ವರ್ಷ ಟ್ರಂಪ್ ಅಧ್ಯಕ್ಷರಾಗಬೇಕು ಎಂದು ತಮ್ಮ ಬೆಂಬಲ ಸೂಚಿಸಿದರು.
ವೈಟ್ಹೌಸ್ ಬಳಿಯ ಫ್ರೀಡಂ ಪ್ಲಾಜಾದಲ್ಲಿ ಪ್ರತಿಭಟನಾಕಾರರು ನೆರೆದಿದ್ದರು. ಮಧ್ಯಾಹ್ನದ ವೇಳೆಗೆ ಪ್ರತಿಭಟನಾನಿರತರ ಸಂಖ್ಯೆ ಏರುತ್ತಾ ಹೋಯ್ತು. ದಾರಿಯುದ್ದಕ್ಕೂ ಟ್ರಂಪ್ ಬೆಂಬಲಿಗರು ಫೋರ್ ಮೋರ್ ಇಯರ್ಸ್(ಮತ್ತೆ ನಾಲ್ಕು ವರ್ಷ) ವೀ ವಾಂಟ್ ಟ್ರಂಪ್(ನಮಗೆ ಟ್ರಂಪ್ ಬೇಕು) ಸ್ಟಾಪ್ ದಿ ಸ್ಟೀಲ್(ಕಳ್ಳತನ ನಿಲ್ಲಿಸಿ) ಅಂತಾ ಘೋಷಣೆಗಳನ್ನ ಕೂಗಿದರು ಎಂದು ವರದಿಯಾಗಿದೆ.
- Advertisement -