Friday, September 11, 2026
spot_imgspot_img
spot_imgspot_img

ಕಡಬ: ವರದಿಗಾರನಿಗೆ ಜೀವ ಬೆದರಿಕೆ

- Advertisement -
- Advertisement -

ಕಡಬ ಪೇಟೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯ ಬಗ್ಗೆ ವರದಿ ಪ್ರಕಟಿಸಿದ ವರದಿಗಾರನಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಕಡಬ ಪೇಟೆಯಲ್ಲಿ ಯಾವುದೇ ಸಂಚಾರ ನಿಯಮ ಪಾಲಿಸದೆ ಪೇಟೆಯುದ್ದಕ್ಕೂ ತೆರೆದ ಟಿಪ್ಪರ್ ವಾಹನಗಳಲ್ಲಿ ಮಣ್ಣು ಸಾಗಿಸುತ್ತ ಹಿನ್ನಲೆ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯ ಖಾಸಗಿ ವೆಬ್ ಸೈಟ್ ನಲ್ಲಿ ಸುದ್ದಿ ಬಿತ್ತರಿಸಲಾಗಿತ್ತು. ಈ ಸುದ್ದಿ ಪ್ರಕಟಿಸಿದ ವರದಿಗಾರ ಗಣೇಶ್ ಇಡಾಳ ಎಂಬವರಿಗೆ ಪ್ರತಾಪ್ ಎಂಬಾತ ವಾಟ್ಸಪ್ ಗ್ರೂಪ್ ನಲ್ಲಿ ವಾಯ್ಸ್ ಮೆಸೇಜ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿ ಉಳಿದವರಿಗೆ ಸುಪಾರಿ ಕೊಟ್ಟಿರುತ್ತಾನೆ. ಈ ಬಗ್ಗೆ ವರದಿಗಾರ ಗಣೇಶ್ ಇಡಾಳ ಕಡಬ ಪೊಲೀಸ್ ಠಾಣೆಗೆ ದೂರ ನೀಡಿದ್ದು, ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!