Tuesday, June 9, 2026
spot_imgspot_img
spot_imgspot_img

ವಿಟ್ಲ: ಮಾಡತ್ತಡ್ಕದಲ್ಲಿ ಭಾರೀ ಸ್ಪೋಟಕ ಸದ್ದು, ಭಯಭೀತಗೊಂಡ ಜನತೆ

- Advertisement -
- Advertisement -

ವಿಟ್ಲ: ವಿಟ್ಲ ಪರಿಸರದಲ್ಲಿ ಮಧ್ಯಾಹ್ನದ ಹೊತ್ತು ಭಾರೀ ಸ್ಪೋಟಕ ಸದ್ದು ಕೇಳಿಸಿದ್ದು, ವಿಟ್ಲ ಪರಿಸರ ಸೇರಿದಂತೆ ಆಸುಪಾಸಿನ ಜನ ಭಯಭೀತರಾಗಿದ್ದಾರೆ. ವಿಟ್ಲ ಪೇಟೆ ಸೇರಿದಂತೆ ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ಸ್ಪೋಟಕ ಸದ್ದು ಕೇಳಿಸಿದ್ದು, ಶಬ್ದಕ್ಕೆ ಭಯಭೀತಗೊಂಡ ಜನರು ಭೂಕಂಪನ ಸಂಭವಿಸಿರಬಹುದೆಂದು ಊಹಿಸಿ ಭಯಭೀತರಾಗಿದ್ದರು. ಬಳಿಕ ವಿಚಾರಿಸಿದಾಗ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಪಷ್ಟಗೊಂಡಿದೆ.

ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಕೋರೆ ಸಮೀಪದ ಗುಡ್ಡದಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ಶೇಖರಿಸಿಟ್ಟಿದ್ದ. ಬಿಸಿಲಿನ ತಾಪಕ್ಕೆ ಅದು ಸ್ಪೋಟಗೊಂಡಿದೆ. ಘಟನೆಯಲ್ಲಿ ಕೋರೆಯ ಹತ್ತಿರದಲ್ಲಿದ್ದ ಮನೆಗಳಿಗೆ ಹಾನಿಯಾಗಿದೆ. ಎರಡು ಮನೆಗಳ ಕಿಟಕಿಯ ಗಾಜು ಪುಡಿಯಾಗಿದ್ದು, ಗೋಡೆ ಬಿರುಕುಗೊಂಡಿದೆ.ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳಕ್ಕೆ ಕಂದಾಯ ನಿರೀಕ್ಷಕರು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಪಿಡಿಓ, ಜಿಲ್ಲಾ ಎಸ್ ಪಿ ಯತೀಶ್ ಎನ್ , ಮತ್ತು ಇಂಟೆಲಿಜೆಂಟ್ಸ್ ವಿಭಾಗದವರು ಮತ್ತು ವಿಟ್ಲ ಠಾಣಾಧಿಕಾರಿ ನಾಗರಾಜ್ ಎಚ್ ಇ ಮತ್ತು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!