- Advertisement -
- Advertisement -



ಮೂಡುಬಿದಿರೆ: ವಿದ್ಯುತ್ ಗುತ್ತಿಗೆದಾರ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕಾರ್ಕಳ ಏಳ್ಳಾಡುಗುತ್ತು ಸತ್ಯಪ್ರಕಾಶ್ ಹೆಗ್ಡೆ (49) ಎಂದು ತಿಳಿದು ಬಂದಿದೆ. ಅವರು ಗುರುವಾರ ತಡರಾತ್ರಿ ಸ್ವರಾಜ್ಯ ಮೈದಾನ ಬಳಿಯ ತಮ್ಮ ಮನೆ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಡುಬಿದಿರೆಯಲ್ಲಿ ಅನ್ನಪೂರ್ಣೇಶ್ವರಿ ಎಲೆಕ್ಟಿಕಲ್ಸ್ ಆ್ಯಂಡ್ ಟ್ರಾನ್ಸ್ಪೊರ್ಟ್ ವ್ಯವಹಾರ ಹೊಂದಿದ್ದು, ಎರಡು ದಶಕಗಳಿಂದ ವಿದ್ಯುತ್ ಗುತ್ತಿಗೆದಾರರಾಗಿದ್ದರು.ಮೂಡುಬಿದಿರೆ ವಿದ್ಯುತ್ ಗುತ್ತಿಗೆ ದಾರರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ.
- Advertisement -








