- Advertisement -
- Advertisement -



ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು 9-3-2025ನೇ ರವಿವಾರದಿಂದ 16-3-2025ನೇ ರವಿವಾರದವರೆಗೆ ನಡೆಯಲಿದೆ.
ದಿನಾಂಕ: 14-3-2025ನೇ ಶುಕ್ರವಾರ ಬೆಳಿಗ್ಗೆ 8:00ಕ್ಕೆ ಗಣಪತಿಹೋಮ, ತ್ರಿಕಾಲಪೂಜೆ, ಅಂಕುರಪೂಜೆ ನಡೆದು ಬಳಿಕ 9:00ಕ್ಕೆ ಶ್ರೀ ಚಂಡಿಕಾ ಹವನ ಪ್ರಾರಂಭವಾಗಲಿದೆ. 12:00ಕ್ಕೆ ದುರ್ಗಾಪೂಜೆ, ಮಧ್ಯಾಹ್ನ ಅಂಕುರಪೂಜೆ, ಶ್ರೀ ಚಂಡಿಕಾ ಹವನ ಪೂರ್ಣಾಹುತಿ ನಡೆದು 12:30ಕ್ಕೆ ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 8:00ಕ್ಕೆ ದುರ್ಗಾಪೂಜೆ, ಅಂಕುರಪೂಜೆ, ನೂತನ ಬಿಂಬಗಳ ಜಲಾಧಿವಾಸ ನಡೆಯಲಿದೆ. ಸಂಜೆ 6.00ರಿಂದ ಕಲಾಸಾರಥಿ ತೋನ್ಸೆ ಪುಷ್ಕಳಕುಮಾರ್ ಹಾಗೂ ಬಳಗದವರಿಂದ ಭಕ್ತಿ-ಭಾವ, ಜಾನಪದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

- Advertisement -