Saturday, June 28, 2025
spot_imgspot_img
spot_imgspot_img

ಮಲ್ಪೆ: ಆಯತಪ್ಪಿ ಬೋಟಿನ ಒಳಗೆ ಬಿದ್ದು ವ್ಯಕ್ತಿ ಮೃತ್ಯು..!

- Advertisement -
- Advertisement -

ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟೊಂದರಲ್ಲಿ ಕಲಾಸಿಯಾಗಿ ಕಾರ್ಯ ನಿರ್ವಹಿಸುತಿದ್ದ ಆಯತಪ್ಪಿ ಬೋಟಿನ ಒಳಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಬ್ರಹ್ಮಾವರದ ನರಸಿಂಹ (62) ಎಂದು ಗುರುತಿಸಲಾಗಿದೆ.

ನರಸಿಂಹ ಎಂಬವರು ಮಾ.19ರಂದು ನವೀನ್ ಎಂಬವರ ಮಾಲಕತ್ವದ ವೀರಾಂಜನೇಯ ಪರ್ಸಿನ್ ಬೋಟಿನಲ್ಲಿ ಕೆಲಸ ಮಾಡುತಿದ್ದಾಗ ಬೆಳಗ್ಗೆ 6:30ರ ಸುಮಾರಿಗೆ ಆಯತಪ್ಪಿ ಬೋಟಿನ ಒಳಗೆ ಬಿದ್ದು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!