

ವಿಟ್ಲ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಬಂಟ್ವಾಳ ಹಾಗೂ ಮಹಿಳಾ ಮಂಡಲ (ರಿ.) ವಿಟ್ಲ ಇವರ ಜಂಟಿ ಸಹಯೋಗದಲ್ಲಿ ’ವಿಶ್ವ ಮಹಿಳಾ ದಿನಾಚರಣೆ’ಯು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ.) ಹಾಗೂ ಮಹಿಳಾಮಂಡಲ (ರಿ.) ವಿಟ್ಲ ಅಧ್ಯಕ್ಷೆ ಧರ್ಮಾವತಿ ವಿ.ಬಿ ದೇವರಮನೆ ಇವರು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ವಿಟ್ಲ ಪೊಲೀಸ್ ಠಾಣೆ ಉಪನಿರೀಕ್ಷಕರು ವಿದ್ಯಾ , ನಿವೃತ್ತ ಅಂಚೆ ಪಾಲಕರು ಸವಿತಾ ಕುಮಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ತಾಲೂಕು ಮಹಿಳಾಮಂಡಲಗಳ ಒಕ್ಕೂಟ(ರಿ.) ಉಪಾಧ್ಯಕ್ಷೆ ಮೀನಾಕ್ಷಿ. ಆರ್ ಪೂಜಾರಿ, ವಿಟ್ಲ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಹೇಮಲತಾ.ಜೆ ಸಾಲ್ಯಾನ್, ತೀರ್ಪುಗಾರರಾದ ಜಯಂತಿ ರೆಂಜಾಡಿ, ಮಲ್ಲಿಕಾಲಿಂಗಪ್ಪ ಗೌಡ ಅಳಿಕೆ ಉಪಸ್ಥಿತರಿದ್ದರು.
ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಯಶೋದ ಸೇರಾಜೆ ಪ್ರಾರ್ಥನೆ ನೆರವೇರಿಸಿದರು. ರಶ್ಮಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು, ಅಮಿತಾ ಕೃಷ್ಣ ಸ್ವಾಗತಿಸಿದರು. ಚಂದ್ರಕಾಂತಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಉಷಾ ಕೃಷ್ಣಪ್ಪ ಧನ್ಯವಾದಗೈದರು.








