- Advertisement -
- Advertisement -


ಕಲಬುರಗಿ: ಚಲಿಸುತ್ತಿದ್ದ ಸಾರಿಗೆ ಬಸ್ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಫರಹತಾಬಾದ್ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶೀನಾಥ್ (50) ಎಂದು ಗುರುತಿಸಲಾಗಿದೆ.
ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಗೂ ಪ್ರಯಾಣಿಕರು ಸೇರಿ ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -